ಬೆಂಗಳೂರು, ಅಕ್ಟೋಬರ್ 28, 2021 ( ಕರಾವಳಿ ಟೈಮ್ಸ್) : ಇಂದಿಗೆ (ಅಕ್ಟೋಬರ್ 28) ಮುಗಿಯಲಿದ್ದ ಯುಜಿಸಿಇಟಿ ದಾಖಲಾತಿ ಪರಿಶೀಲನೆ ಅವಧಿಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 30ರವರೆಗೆ ವಿಸ್ತರಿಸಿ ಕೆಇಎ ಆದೇಶ ಹೊರಡಿಸಿದೆ.
ಇದುವರೆಗೆ ದಾಖಲಾತಿ ಪರಿಶೀಲನೆಗೆ ಹಾಜರಾಗದೆ ಇರುವ ಅಭ್ಯರ್ಥಿಗಳು ಯಾವುದೇ ಸಹಾಯಕ ಕೇಂದ್ರಗಳಲ್ಲಿ ಹಾಜರಾಗಿ ದಾಖಲಾತಿ ಪರಿಶೀಲನೆ ನಡೆಸಿಕೊಳ್ಳಬಹುದು. ದಾಖಲೆ ಪರಿಶೀಲನೆ ನಂತರವೇ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಇಚ್ಛೆ/ ಆಯ್ಕೆಯನ್ನು ನಮೂದಿಸಲು ಅರ್ಹತೆ ಪಡೆಯುತ್ತಾರೆ.
0 comments:
Post a Comment