ಬಂಟ್ವಾಳ, ಅಕ್ಟೋಬರ್ 20, 2021 (ಕರಾವಳಿ ಟೈಮ್ಸ್) : ತಾಲೂಕು ಆರೋಗ್ಯ ಕೇಂದ್ರದಲ್ಲಿ ನೂತನ 108 ಎಡ್ವಾನ್ಸ್ ಲೈಫ್ ಸಫೆÇೀರ್ಟ್ ಅಂಬ್ಯುಲೆನ್ಸ್ ವಾಹನವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಬುಧವಾರ ಸೇವೆಗೆ ಅರ್ಪಿಸಿದರು.
ವೆಂಟಿಲೇಟರ್, ಕಾರ್ಡಿಯಾಕ್ ಮೋನಿಟರ್, ಇಸಿಜಿ, ಆಕ್ಸಿಜನ್ ಸೌಲಭ್ಯಗಳನ್ನು ಹೊಂದಿರುವ ತಾಲೂಕಿನಲ್ಲೇ ಪ್ರಥಮ ವಾಹನ ಇದಾಗಿದ್ದು ತುರ್ತು ಸಂಧರ್ಭದಲ್ಲಿ ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಪ್ರಯೋಜನ ಲಭಿಸಲಿದೆ.
ಈ ಸಂಧರ್ಭ ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು, ಬುಡಾ ಅಧ್ಯಕ್ಷ ಬಿ ದೇವದಾಸ್ ಶೆಟ್ಟಿ, 108 ತುರ್ತು ವಾಹನಗಳ ಜಿಲ್ಲಾ ಸಂಯೋಜಕ ಮನೀಶ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment