ದುಬೈ, ಅಕ್ಟೋಬರ್ 31, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಮುನ್ನಡೆಯುತ್ತಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ಅಫಘಾನ್ ವಿರುದ್ದದ ಪಂದ್ಯದಲ್ಲಿ 51 ರನ್ ಸಿಡಿಸುವ ಮೂಲಕ ಟಿ-20 ಪಂದ್ಯದಲ್ಲಿ ನಾಯಕನಾಗಿ 24 ಪಂದ್ಯಗಳಲ್ಲಿ ಸಾವಿರ ರನ್ ಗಳಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ.
ವಿರಾಟ್ ಕೊಹ್ಲಿ ನಾಯಕನಾಗಿ ಸಾವಿರ ರನ್ ಪೂರೈಸಲು 30 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಬಾಬರ್ ಕೇವಲ 26 ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಗಳನ್ನು ಪೂರೈಸಿ ಈ ವಿಶೇಷ ದಾಖಲೆಗೆ ಅರ್ಹರಾಗಿದ್ದಾರೆ.
ಅದೇ ರೀತಿ ಸೌತ್ ಆಫ್ರಿಕಾದ ಫಾಫ್ ಡು ಪ್ಲೆಸಿಸ್ (31), ಆಸ್ಟ್ರೇಲಿಯಾದ ಆರೋನ್ ಫಿಂಚ್ (32) ಮತ್ತು ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ (36) ಈ ವಿಶೇಷ ದಾಖಲೆಯ ಪಟ್ಟಿಯಲ್ಲಿ ಟಾಪ್ 5ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅದೇ ರೀತಿ ಬಾಬರ್ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 13ನೇ ಬಾರಿಗೆ 50+ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಸರಿ ಗಟ್ಟಿದ್ದಾರೆ. ನಾಯಕನಾಗಿ ವಿರಾಟ್ ಕೊಹ್ಲಿ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ವರೆಗೆ 13 ಬಾರಿ ಅರ್ಧ ಶತಕ ಸಿಡಿಸಿದ್ದಾರೆ. ಅಝಂ ಕೂಡಾ 13 ಹಾಫ್ ಸೆಂಚುರಿ ಭಾರಿಸಿದ್ದಾರೆ.
0 comments:
Post a Comment