ನಂದಾವರ : ಮೇಯಲು ಬಿಟ್ಟ 4 ದನಗಳು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು - Karavali Times ನಂದಾವರ : ಮೇಯಲು ಬಿಟ್ಟ 4 ದನಗಳು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು - Karavali Times

728x90

3 October 2021

ನಂದಾವರ : ಮೇಯಲು ಬಿಟ್ಟ 4 ದನಗಳು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು

ಬಂಟ್ವಾಳ, ಅಕ್ಟೋಬರ್ 04, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನಂದಾವರ ಮುಖ್ಯ ಪೇಟೆಯ ಬಳಿ ಮೇಯಲು ಬಂದಿದ್ದ ಎರಡು ಜಾನುವಾರುಗಳು ಕಾಣೆಯಾದ ಬಗ್ಗೆ ನಂದಾವರ-ಕೊಪ್ಪಳ ನಿವಾಸಿ ಅಬ್ದುಲ್ ರಶೀದ್ ಎನ್ ಕೆ ಬಿನ್ ಇಸ್ಮಾಯಿಲ್ ಎನ್ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. 

ರಶೀದ್ ಅವರು ಕೃಷಿಕರಾಗಿದ್ದು, ಕಳೆದ 15 ವರ್ಷಗಳಿಂದ ದನ-ಜಾನುವಾರು ಸಾಕುತ್ತಿದ್ದಾರೆ. ಸದ್ಯ ಅವರಲ್ಲಿ 25 ಜಾನುವಾರುಗಳಿವೆ. ಅವರ ಹಟ್ಟಿಯಲ್ಲಿರುವ ಈ ಜಾನುವಾರುಗಳು ಬೆಳಿಗ್ಗೆ ಪರಿಸರದಲ್ಲಿ ಮೇಯಲು ಹೋಗುತ್ತಿದ್ದು, ಸಂಜೆ ವೇಳೆಗೆ ಮರಳಿ ಹಟ್ಟಿ ಸೇರುತ್ತಿವೆ. ಆದರೆ ಕಳೆದ ಸೆ 24 ರಂದು ಮೇಯಲು ತೆರಳಿದ ಜಾನುವಾರುಗಳ ಪೈಕಿ ಕೆಂಪು ಬಣ್ಣದ 2 ಹೋರಿ ಹಾಗೂ ಕಪ್ಪು ಮಿಶ್ರಿತ ಬಣ್ಣದ 2 ದನಗಳು ಮರಳಿ ಹಟ್ಟಿಗೆ ಬಂದಿರುವುದಿಲ್ಲ. ಉಳಿದ ಎಲ್ಲ ಜಾನುವಾರುಗಳು ಕೂಡಾ ಹಟ್ಟಿಗೆ ಮರಳಿರುತ್ತದೆ. 

ಕಾಣೆಯಾದ 4 ಜಾನುವಾರುಗಳನ್ನು ಪರಿಸರದ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಯಾರೋ ಜಾನುವಾರು ಕಳ್ಳರು ಈ ದನಗಳನ್ನು ಕಳವುಗೈದ ಬಗ್ಗೆ ಸಂಶಯವಿದ್ದು, ಈ ಬಗ್ಗೆ ರಶೀದ್ ಅವರು ಬಂಟ್ವಾಳ ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿ ಪ್ರಕರಣ ಬೇಧಿಸಲು ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ : ಮೇಯಲು ಬಿಟ್ಟ 4 ದನಗಳು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು Rating: 5 Reviewed By: karavali Times
Scroll to Top