ಬಂಟ್ವಾಳ, ಸೆಪ್ಟೆಂಬರ್ 29, 2021 (ಕರಾವಳಿ ಟೈಮ್ಸ್) : ತಾಲೂಕಿನ ಮೂಡುಪಡುಕೋಡಿ ಗ್ರಾಮದ ಮುಂಡಬೈಲು ನಿವಾಸಿ ದಿವಂಗತ ಲಿಂಗಪ್ಪ ಪೂಜಾರಿ ಅವರ ಪತ್ನಿ ಗಿರಿಜಾ ಅವರಿಗೆ ಜಾಗದ ತಕರಾರು ವಿಚಾರದಲ್ಲಿ ಆರೋಪಿಗಳಾದ ಸುಂದರ ಶೆಟ್ಟಿ ಹಾಗೂ ಸುಮತಿ ಅವರು ಅವ್ಯಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿರಿಜಾ ಹಾಗೂ ಆರೋಪಿಗಳಿಗೆ ಜಾಗದ ತಕರಾರು ಇದ್ದು, ಜುಲೈ 9 ರಂದು ಗಿರಿಜಾ ಅವರು ಮನೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಗಿರಿಜಾ ಅವರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಗಿರಿಜಾ ಅವರು ಜುಲೈ 10 ರಂದು ಠಾಣೆಗೆ ನೀಡಿದ ದೂರಿನಂತೆ ಎನ್ ಸಿ ನಂಬ್ರ 295/ ಎನ್‍ಸಿ / ಪಿಪಿಎಸ್ / 2021 ಯಂತೆ ದೂರು ದಾಖಲಾಗಿತ್ತು. ಆದರೆ ಇದೊಂದು ಅಸಂಜ್ಞೆಯ ಪ್ರಕರಣವಾಗಿರುವುದರಿಂದ ಗಿರಿಜಾ ಅವರು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಅನುಮತಿಗಾಗಿ ಬಂಟ್ವಾಳ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಕೋರಿಕೊಂಡ ಹಿನ್ನಲೆಯಲ್ಲಿ ನ್ಯಾಯಾಲಯವು ಡಿಸ್ ನಂಬ್ರ 2342/2021 ಸೆ 28 ರಂದು ಎಂಸಿ ಸಂಖ್ಯೆ 152/2021 ರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಅನುಮತಿ ನೀಡಿದ ಪ್ರಕಾರ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 67/2021 ಕಲಂ 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment