ಬೆಂಗಳೂರು, ಸೆಪ್ಟಂಬರ್ 20, 2021 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಅವರು ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿಸದರು.
ಅಗ್ರಿಕಲ್ಚರ್, ಎಂಜಿನಿಯರಿಂಗ್ ಸೇರಿ ಎಲ್ಲಾ 5 ವಿಭಾಗದಲ್ಲೂ ಮೈಸೂರಿನ ಮೇಘನ್ ಪ್ರಥಮ ರ್ಯಾಂಕ್ ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ವರ್ಷ 6 ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದು, ಗಣಿತ ಹಾಗೂ ಭೌತಶಾಸ್ತ್ರ ವಿಷಯಕ್ಕೆ ತಲಾ 3 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಮುಂದಿನ ವರ್ಷದ ವ್ಯಾಸಂಗಕ್ಕೆ ಸಿಇಟಿ ಫಲಿತಾಂಶವನ್ನು ಆಧರಿಸಿ ಮೂಲ ದಾಖಲಾಗಿ ಪರಿಶೀಲನೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸೌಲಭ್ಯ ಕೇಂದ್ರ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ರಿಂದ ದಾಖಲಾತಿ ಪರಿಶೀಲನೆ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಹತ್ತಿರದ ಕೇಂದ್ರಕ್ಕೆ ಹೋಗಿ ದಾಖಲಾತಿ ನೀಡಬೇಕು ಎಂದು ಸಚಿವರು ತಿಳಿಸಿದ್ದಾರೆ.
ಮೈಸೂರಿನ ಮೇಘನ್, ಎಂಜಿನಿಯರಿಂಗ್, ಅಗ್ರಿಕಲ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ಸಂಗೋಪನೆ, ಕೃಷಿ, ಬಿ.ಫಾರ್ಮ್ ಈ ಐದೂ ವಿಭಾಗದಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ದ್ವಿತೀಯ ರ್ಯಾಂಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೇಮಾಂಕುರ್ ಚಕ್ರವರ್ತಿ ಬೆಂಗಳೂರು, ಯೋಗ-ನ್ಯಾಚಿರೋಪತಿಯಲ್ಲಿ ವರುಣ್ ಆದಿತ್ಯಾ ಬೆಂಗಳೂರು, ಕೃಷಿಯಲ್ಲಿ ರೀಥಮ್ ಮಂಗಳೂರು, ಪಶು ಸಂಗೋಪನೆಯಲ್ಲಿ ವರುಣ್ ಅದಿತ್ಯಾ ಬೆಂಗಳೂರು ಮತ್ತು ಬಿ. ಫಾರ್ಮ್ ನಲ್ಲಿ ಪ್ರೇಮಾಂಕುರ್ ಚಕ್ರಬರ್ತಿ ಬೆಂಗಳೂರು ಅವರು ಪಡೆದಿದ್ದಾರೆ.
ಆಗಸ್ಟ್ 28 ರಿಂದ 30 ರವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಈ ಬಾರಿ 2,01,834 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 1,93,447 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಿದ್ದರು. 12 ಕೋವಿಡ್ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದರು.
0 comments:
Post a Comment