ಬೆಂಗಳೂರು, ಸೆಪ್ಟೆಂಬರ್ 10, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಇಳಿಮುಖವಾಗಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೇರಿದ್ದ ವಾರಾಂತ್ಯ ನಿರ್ಬಂಧ ತೆರವುಗೊಳಿಸಿ ಸರಕಾರ ಆದೇಶಿಸಿದೆ.
ವೀಕೆಂಡ್ ಕರ್ಫ್ಯೂ ತೆರವು ಮಾಡಲಾಗಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆಯ ಜನ ಇನ್ನು ಮುಂದೆ ಶನಿವಾರ-ಭಾನುವಾರವೂ ಮುಕ್ತವಾಗಿ ವ್ಯಾಪಾರ-ವಹಿವಾಟು ನಡೆಸಬಹುದು. ರಾಜ್ಯದ ಸರಾಸರಿ ಪಾಸಿಟಿವಿಟಿ ರೇಟ್ ಶೇ. 0.73ಕ್ಕೆ ಇಳಿದಿದೆ. ವೀಕೆಂಡ್ ಕರ್ಫ್ಯೂ ಹೇರಿಕೆ ಮಾಡಲಾಗಿದ್ದ ಜಿಲ್ಲೆಗಳಲ್ಲಿ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದೆ. ಈ ಹಿನ್ನೆಲೆ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿ.
ಮತ್ತೆ ಸೋಂಕು ಹೆಚ್ಚಳದ ಲಕ್ಷಣಗಳು ಹೆಚ್ಚಾದರೆ ವಾರಾಂತ್ಯ ನಿರ್ಬಂಧ ವಿಧಿಸುವ ಅಧಿಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಮಹಾರಾಷ್ಟ್ರ ಮತ್ತು ಕೇರಳದ ಗಡಿ ಜಿಲ್ಲೆಗಳಾದ ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಈ ಮೂಲಕ ವಾರಾಂತ್ಯದಲ್ಲಿ ನಿರ್ಬಂಧದಿಂದ ಮುಕ್ತವಾಗಿವೆ. ಆದರೆ ರಾತ್ರಿ ನಿರ್ಬಂಧ ಮುಂದುವರಿಯಲಿದೆ.
0 comments:
Post a Comment