ಬಂಟ್ವಾಳ, ಸೆಪ್ಟಂಬರ್ 15, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕೇಪು ಗ್ರಾಮದ ಅಡ್ಯನಡ್ಕ-ವಾರಣಾಸಿ ಪಾರ್ಮ್ ಹೌಸಿಗೆ ಕೃಷಿ ಅಧ್ಯಯನಕ್ಕೆಂದು ಬಂದಿದ್ದ ಮಂಗಳೂರು ತಾಲೂಕು, ಪ್ರಶಾಂತನಗರ, ಚರ್ಚ್ ರಸ್ತೆ ನಿವಾಸಿ, ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅವಿವಾಹಿತೆ ಡಾ. ಮೈಜೀ ಕರೋಲ್ ಫೆರ್ನಾಂಡೀಸ್ (31) ಅವರು ಮಂಗಳವಾರ ಕೃಷಿ ಹೊಂಡದಲ್ಲಿ ಆಕಸ್ಮಿಕ ಮುಳುಗಿ ಮೃತಪಟ್ಟಿದ್ದಾರೆ.
ಕೃಷಿ ಅಧ್ಯಯನಕ್ಕೆಂದು ಸೆ 12 ರಂದು ಇಲ್ಲಿನ ಫಾರ್ಮ್ ಹೌಸಿಗೆ ಬಂದಿದ್ದರು. ಸೆ 14 ರ ಮಂಗಳವಾರ ಸಂಜೆ 5.45ರ ವೇಳೆಗೆ ಫಾರ್ಮ್ ಹೌಸಿನ ಕೃಷಿ ಹೊಂಡದ ಬಳಿ ಯಾರೂ ಇಲ್ಲದ ಸಂದರ್ಭ ಈಜಾಟಕ್ಕೆ ಏಕಾಂಗಿಯಾಗಿ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಅವರು ಆಕಸ್ಮತ್ ಆಗಿ ನೀರಿನಲ್ಲಿ ಮುಳುಗಿದ್ದಾರೆ. ಕೆರೆಯ ಬಳಿ ಹೋದವರು ಕೆಲ ಸಮಯ ಕಳೆದರೂ ಹಿಂತಿರುಗಿ ಬಾರದ ಕಾರಣ ಹುಡುಕಾಡಿದಾಗ ನೀರಿನಡಿಯಲ್ಲಿದ್ದ ದೇಹ ಕಂಡು ಬಂದಿದ್ದು, ತಕ್ಷಣ ಹೊರ ತೆಗೆದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮೃತರ ಸಹೋದರಿ ಕು ಟ್ರೆಸ್ಟ ಡಯನಾ ಫೆರ್ನಾಂಡಿಸ್ ಅವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಯುಡಿಆರ್ ನಂಬ್ರ 27/2021 ಕಲಂ 174 ಸಿಆರ್‍ಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment