ಬಂಟ್ವಾಳ, ಸೆಪ್ಟೆಂಬರ್ 05, 2021 (ಕರಾವಳಿ ಟೈಮ್ಸ್) : ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೊಡಂಬೆಟ್ಟು ಗ್ರಾಮದ ಪತ್ತುರ್ಲೆ ನಿವಾಸಿ ರಾಜೇಶ್ ಪೂಜಾರಿ (45) ಅವರು ಮೃತದೇಹ ಭಾನುವಾರ ನಯನಾಡು ಪರಿಸರದ ಗುಡ್ಡ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾಜೇಶ್ ಅವರು ನಯನಾಡುನ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಸೆ 2ರಂದು ಮನೆಗೆ ಬಂದು ತೆರಳಿದವರು ಬಳಿಕ ನಾಪತ್ತೆಯಾಗಿದ್ದರು. ನಾಪತ್ತೆ ಬಳಿಕ ಮನೆ ಮಂದಿ ಸಹಿತ ಊರವರು ರಾಜೇಶ್ ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ್ದರೂ ಎಲ್ಲೂ ಪತ್ತೆಯಾಗಿರಲಿಲ್ಲ. ಇವರ ನಾಪತ್ತೆ ಬಗ್ಗೆ ಭಾವಚಿತ್ರ ಸಹಿತ ಸಾಮಾಜಿಕ ಜಾಲ ತಾಣಗಳಲ್ಲೂ ವೈರಲ್ ಮಾಡಲಾಗಿತ್ತು. ಆದರೂ ಪತ್ತೆ ಇರಲಿಲ್ಲ. ಬ
ಬಳಿಕ ಈ ಬಗ್ಗೆ ಶುಕ್ರವಾರ ಪೂಂಜಾಲಕಟ್ಟೆ ಪೊಲೀಸರಿಗೆ ಕುಟುಂಬಿಕರು ದೂರು ನೀಡಿದ್ದರು. ಭಾನುವಾರ ಬೆಳಗ್ಗೆ ರಾಜೇಶ್ ಅವರ ಮೃತದೇಹ ನಯನಾಡಿನ ಖಾಸಗಿ ಜಮೀನಿನ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರು, ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
0 comments:
Post a Comment