ಬೆಂಗಳೂರು, ಸೆಪ್ಟಂಬರ್ 04, 2021 (ಕರಾವಳಿ ಟೈಮ್ಸ್) : ಎನ್.ಎಸ್.ಪಿ. ಸ್ಕಾಲರ್ ಶಿಪ್ ಗಾಗಿ ಮುಸ್ಲಿಂ, ಕ್ರೈಸ್ತ, ಜೈನ, ಫಾರ್ಸಿ ಮೊದಲಾದ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಕರ್ನಾಟಕ ಅಲ್ಪಸಂಖ್ಯಾತ ಇಲಾಖೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಆಹ್ವಾನಿಸಿ ಆದೇಶ ಹೊರಡಿಸಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ 50 (1ನೇ ತರಗತಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಬಹುದು. ಪ್ರಿಮೆಟ್ರಿಕ್ (1 ರಿಂದ 10ನೇ ತರಗತಿ ವಿದ್ಯಾರ್ಥಿಗಳು) ಕೊನೆ ದಿನಾಂಕ ನವೆಂಬರ್ 15, 2021, ಪೆÇೀಸ್ಟ್ ಮೆಟ್ರಿಕ್ (ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳು) ಕೊನೆ ದಿನಾಂಕ ನವೆಂಬರ್ 30, 2021, ಮೆರಿಟ್ ಕಂ ಮೀನ್ಸ್ (ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು) ಕೊನೆ ದಿನಾಂಕ ನವೆಂಬರ್ 30, 2021 ಆಗಿರುತ್ತದೆ ಎಂದು ಇಲಾಖಾ ಅಧಿಸೂಚನೆ ತಿಳಿಸಿದೆ.
0 comments:
Post a Comment