ಬಂಟ್ವಾಳ, ಸೆಪ್ಟಂಬರ್ 28, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಟ್ವೆಕಾಂಡೋ ಆಶ್ರಯದಲ್ಲಿ ಎಕ್ಸ್ರೀಂ ಫೈಟ್ ಕ್ಲಬ್ ಹಾಗೂ ಮಾರ್ಶಲ್ ಆಟ್ರ್ಸ್ ಕೃಷ್ಣಾಪುರ ಇದರ ಸಹಯೋಗದೊಂದಿಗೆ ಆಯೋಜಿಸಲಾದ ಮಿಸ್ಟರ್ ದಕ್ಷಿಣ ಕನ್ನಡ ದ್ವಿತೀಯ ವಾರ್ಷಿಕ ಟ್ವೆಕಾಂಡೋ ಚಾಂಪಿಯನ್ ಶಿಪ್ ಕೂಟಕ್ಕೆ ಇತ್ತೀಚೆಗೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಒಳಾಂಗಣದಲ್ಲಿ ಚಾಲನೆ ನೀಡಲಾಯಿತು.
ಅಂಡರ್ 54, ಅಂಡರ್ 64, ಅಂಡರ್ 74 ಹಾಗೂ 80 ಕೆಜಿ ಮೇಲ್ಪಟ್ಟ ಈ ನಾಲ್ಕು ವಿಭಾಗಗಳಲ್ಲಿ ಪಂದ್ಯಾಕೂಟ ನಡೆದಿದ್ದು, ಒಟ್ಟು 21 ಮಂದಿ ಟ್ವೆಕಾಂಡೋ ಪಟುಗಳು ಭಾಗವಹಿಸಿದ್ದರು. ಈ ಪೈಕಿ 3 ಮಂದಿ ಫೈನಲ್ ಹಂತಕ್ಕೆ ತೇರ್ಗಡೆಗೊಂಡರೆ, 10 ಮಂದಿ ಸೆಮಿ ಫೈನಲ್ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ಕೂಟದ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ಮಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಅಧ್ಯಕ್ಷ ಟಿ ಅಬ್ದುಲ್ ಅಝೀಝ್ ಕೃಷ್ಣಾಪುರ, ಸದಸ್ಯ ಶಾಂತರಾಮ ಶೆಣೈ ಕೈಕುಂಜೆ-ಬಿ ಸಿ ರೋಡು, ಪ್ರಕಾಶ್ ಕುಮಾರ್ ನರಿಕೊಂಬು, ಶಾರದಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್, ನಿವೃತ್ತ ದೈಹಿಕ ಶಿಕ್ಷಕ ವೆಂಕಟರಾಯ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಬಾಡಿ ಬಿಲ್ಡರ್ಸ್ ಎಸೋಸಿಯೇಶನ್ ಉಪಾಧ್ಯಕ್ಷ ಪಿ ಎಂ ಇಲ್ಯಾಸ್ ಜೈನರಪೇಟೆ, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಉದ್ಯಮಿ ಶಾನವಾಝ್ ಗೂಡಿನಬಳಿ ಮೊದಲಾದವರು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಪದಾಧಿಕಾರಿ ಇಸಾಕ್ ನಂದಾವರ ಸ್ವಾಗತಿಸಿ, ಸುಹೈಲ್ ಕಡಂಬು ವಂದಿಸಿದರು. ಹಫೀಝ್ ಬೋಗೋಡಿ, ಕೀರ್ತಿ ಪ್ರಕಾಶ್ ನರಿಕೊಂಬು, ಪ್ರೇಕ್ಷ ಸುವರ್ಣ ಮಾರ್ನಬೈಲು, ವಿಲಾಯತ್ ರಾಫಿ ಗೂಡಿನಬಳಿ, ಫಾತಿಮಾ ಮುಸ್ಕಾನಾ ನೆಹರುನಗರ, ಶಾಬಾನ್ ಕೃಷ್ಣಾಪುರ, ಸಿರ್ಹಾನ್ ಕೃಷ್ಣಾಪುರ, ಝೈಫ್ ಬೊಳ್ಳಾಯಿ, ಮಿಶ್ರಿಯಾ ಕೃಷ್ಣಾಪುರ, ತನ್ವೀರ್ ತುಂಬೆ, ಮುಹಮ್ಮದ್ ರಾಫಿ ಆಲಡ್ಕ ಮೊದಲಾದವರು ಸಹಕರಿಸಿದರು.
0 comments:
Post a Comment