ಬಂಟ್ವಾಳ, ಸೆಪ್ಟೆಂಬರ್ 21, 2021 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮದ ಮುಳಿಪಡ್ಪು ನಿವಾಸಿ ಮನೋಹರ-ಯಮುನಾ ದಂಪತಿಯ ಪುತ್ರನಿಗೆ ಪ್ರಾಪ್ತ ವಯಸ್ಸು ಆಗದೆ ಇದ್ದರೂ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ 19 ರಂದು ವಿವಾಹ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ.
ವರನ ಶಾಲಾ ದಾಖಲಾತಿ ಪ್ರಕಾರ ಆತನ ಜನ್ಮ ದಿನಾಂಕ 05-11-2000 ಆಗಿದ್ದು, ಅಂದರೆ 20 ವರ್ಷ 10 ತಿಂಗಳು 16 ದಿನ ಮಾತ್ರ ಆಗಿದ್ದು, ಸರಕಾರಿ ನಿಯಮ ಪ್ರಕಾರ ವಿವಾಹಕ್ಕೆ ಪ್ರಾಪ್ತ ವಯಸ್ಸು ಅಲ್ಲದೆ ಇರುವ ಬಗ್ಗೆ ಸ್ಥಳೀಯರು ಚೈಲ್ಡ್ ಲೈನ್ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಎಚ್ ಅವರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಡುಗನಿಗೆ ಪ್ರಾಪ್ತ ವಯಸ್ಸು ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಹಿನ್ನಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 111/2021 ಕಲಂ 10, 11 ಬಾಲ್ಯ ವಿವಾಹ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment