ಬಂಟ್ವಾಳ, ಸೆಪ್ಟಂಬರ್ 26, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಸಮೀಪದ ಹಳೀರ ನಿವಾಸಿ, ಉದ್ಯಮಿ ರಶೀದ್ ಖಾನ್ (65) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ (ಸೆ. 26) ಬೆಳಗ್ಗೆ ನಿಧನರಾದರು.
ಮೂಲತ: ಬೆಂಗಳೂರು ನಿವಾಸಿಯಾದ ಇವರು ಕಳೆದ 40 ವರ್ಷಗಳಿಂದ ಮಾಣಿಯಲ್ಲಿ ನೆಲೆಸಿದ್ದು ನ್ಯೂ ಕ್ವಾಲಿಟಿ ಸ್ಟೀಲ್ ಫರ್ನಿಚರ್ (ಕಪಾಟು), ಆಡು ಮತ್ತು ಕೋಳಿ ಮಾಂಸದ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ, ಐದು ಮಂದಿ ಪುತ್ರರು, ನಾಲ್ಕು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
0 comments:
Post a Comment