ಬಂಟ್ವಾಳ, ಸೆಪ್ಟಂಬರ್ 26, 2021 (ಕರಾವಳಿ ಟೈಮ್ಸ್) : ಭವಿಷ್ಯದ ದಿನಗಳಲ್ಲಿ ಯಕ್ಷಗಾನ ತಂಡಗಳು ಉಳಿಯಬೇಕಾದರೆ ಯಕ್ಷ ನಾಟ್ಯದ ತರಗತಿಗಳು ಅನಿವಾರ್ಯವಾಗಿದೆ. ಯಕ್ಷನಾಟ್ಯ ತಂಡಗಳು ಆರಂಭವಾದರೂ ಅದನ್ನು ಮುಂದಿನ ದಿನಗಳಲ್ಲಿ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಹಿರಿಯ ಯಕ್ಷಗಾನ ಕಲಾವಿದ ಜಯರಾಮ್ ಆಚಾರಿ ಅಭಿಪ್ರಾಯಪಟ್ಟರು.
ಯಕ್ಷ ಪ್ರೇಮಿಲು ಬಂಟ್ವಾಳ ಇದರ ಆಶ್ರಯದಲ್ಲಿ ಕೆಂಪುಗುಡ್ಡೆ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ (ಸೆ 26) ನಡೆದ ತೆಂಕುತಿಟ್ಟು ಯಕ್ಷಗಾನದ ನಾಟ್ಯ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಅಧ್ಯಕ್ಷ ಸರಪಾಡಿ ಮಾತನಾಡಿ ಧಾರ್ಮಿಕತೆಗೆ ಪೂರಕವಾಗಿ ಯಕ್ಷಗಾನವು ಸೇವಾರೂಪವಾಗಿ ನಡೆಯುತ್ತಿದೆ. ನಾಟ್ಯ ತರಗತಿಗಳು ಪ್ರಾರಂಭವಾದಷ್ಟು ಯಕ್ಷಗಾನಕ್ಕೆ ಮೆರುಗು ಬರುತ್ತದೆ ಎಂದರು.
ಯಕ್ಷ ನಾಟ್ಯ ಶಿಕ್ಷಕ ಸುನಿಲ್ ಪಲ್ಲಮಜಲು, ಅಮ್ಟಾಡಿ ಪಂಚಾಯತ್ ಉಪಾಧ್ಯಕ್ಷ ಸುನಿಲ್ ಕಾಯರ್‍ಮಾರ್, ಪಂಚಾಯತ್ ಸದಸ್ಯರಾದ ಯಶವಂತ ಶೆಟ್ಟಿ, ನಳಿನಿ, ಕೆಂಪುಗುಡ್ಡೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ದಿವಾಕರ ಕಿನ್ನಿಬೆಟ್ಟು, ಕಾಳಬೈರವ ಶಾಖೆ ಯೋಗೀಶ್ ಕೆಂಪುಗುಡ್ಡೆ, ತಂಡದ ಸಂಚಾಲಕ ವಸಂತ, ವರಕೋಡಿ ಮಕ್ಕಳ ಮೇಳ ಸಂಚಾಲಕ ಪ್ರವೀಣ್ ವರಕೋಡಿ ಉಪಸ್ಥಿತರಿದ್ದರು. ಲಕ್ಷ್ಮಣ್ ಗೌಡ ಸ್ವಾಗತಿಸಿ, ಮೋಹಿತ್ ವಂದಿಸಿದರು. ಸುರೇಶ್ ನಾವೂರು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment