ದುಬೈ, ಸೆಪ್ಟೆಂಬರ್ 20, 2021 (ಕರಾವಳಿ ಟೈಮ್ಸ್) : ಋತುರಾಜ್ ಗಾಯಕ್ವಾಡ್ ಅವರ ಭರ್ಜರಿ ಬ್ಯಾಟಿಂಗ್ ಕಾರಣದಿಂದ ಹಾಗೂ ಬೌಲರ್ ಗಳ ಸಂಘಟಿತ ದಾಳಿಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾನುವಾರ ದುಬೈ ಕ್ರೀಡಾಂಗಣದಲ್ಲಿ ಆರಂಭವಾದ ಐಪಿಎಲ್ ದ್ವಿತೀಯ ಭಾಗದ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 20 ರನ್‍ಗಳ ಅಮೋಘ ಜಯ ಪಡೆದುಕೊಂಡಿದೆ.
ಗೆಲುವಿಗೆ 156ರನ್‍ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ದಾಂಡಿಗರು ಚೆನ್ನೈ ತಂಡದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಅಗ್ಗದಲ್ಲಿ ವಿಕೆಟ್ ಒಪ್ಪಿಸಿದರು. ಮುಂಬೈ ಪರ ಸೌರಭ್ ತಿವಾರಿ (ಅಜೇಯ 50 ರನ್, 40 ಎಸೆತ, 5 ಬೌಂಡರಿ) ಕೊನೆಯವರೆಗೆ ಏಕಾಂಗಿ ಹೋರಾಟ ನಡೆಸಿದರೂ ಗೆಲುವು ತಂದುಕೊಡುವಲ್ಲಿ ವಿಫಲರಾದರು.
ಅಂತಿಮವಾಗಿ 20 ಓವರ್ ಗಳಲ್ಲಿ ಮುಂಬೈ ತಂಡ 8 ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಗಿ 20 ರನ್‍ಗಳಿಂದ ಧೋನಿ ಪಡೆಗೆ ಶರಣಾಯಿತು.
ಚೆನ್ನೈ ಪರ ಡ್ವೇನ್ ಬ್ರಾವೋ 3 ವಿಕೆಟ್, ದೀಪಕ್ ಚಹರ್ 2 ವಿಕೆಟ್ ಮತ್ತು ಜೋಸ್ ಹ್ಯಾಶಲ್‍ವುಡ್ ಮತ್ತು ಠಾಕೂರ್ ತಲಾ 1 ವಿಕೆಟ್ ಪಡೆದರು.
0 comments:
Post a Comment