ಮಂಗಳೂರು, ಸೆಪ್ಟಂಬರ್ 26, 2021 (ಕರಾವಳಿ ಟೈಮ್ಸ್) : ಬ್ರಿಟಿಷರ ವಿರುದ್ಧ ಸಮರಧೀರ ಹೋರಾಟ ನಡೆಸಿ ಹುತಾತ್ಮರಾದ ಭಗತ್ ಸಿಂಗ್ ಅವರ ವಾರಸುದಾರ ಸಂಘಟನೆ ಡಿ.ವೈ.ಎಫ್.ಐ. ಭಗತ್ ಸಿಂಗರ ಪ್ರಮುಖ ಆಶಯವಾದ ಸರ್ವರಿಗೂ ಉದ್ಯೋಗ ಸರ್ವರಿಗೂ ಶಿಕ್ಷಣ ಎಂಬ ಘೋಷಣೆಯೇ ಸಂಘಟನೆಯ ಘೋಷಣೆಯಾಗಿದೆ. ಇಂದು ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗದ ಆಸೆ ತೋರಿಸಿದೆ, ಆದರೆ ಉದ್ಯೋಗದ ಸೃಷ್ಟಿಯ ಬದಲು ಕೋಟ್ಯಂತರ ಯುವಜನರು ಉದ್ಯೋಗ ಕಳೆದು ಕೊಂಡಿದ್ದಾರೆ. ಉದ್ಯೋಗ ಹಕ್ಕಿಗೆ ಡಿ.ವೈ.ಎಫ್.ಐ. ನಡೆಸುವ ಸಮರಧೀರ ಹೋರಾಟ ಇಂದಿನ ಅನಿವಾರ್ಯತೆ ಎಂದು ಡಿ.ವೈ.ಎಫ್.ಐ. ಮಾಜಿ ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು.
ಉದ್ಯೋಗದ ಹಕ್ಕಿಗಾಗಿ ಮುನ್ನೂರು ಗ್ರಾಮದ ಯುವಜನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಡಿ.ವೈ.ಎಫ್.ಐ. ಜಿಲ್ಲಾಧ್ಯಕ್ಷ ಬಿ.ಕೆ. ಇಂತಿಯಾಝ್, ಜಿಲ್ಲಾ ಮುಖಂಡರುಗಳಾದ ಜೀವನ್ ರಾಜ್ ಕುತ್ತಾರ್, ಮನೋಜ್ ವಾಮಂಜೂರು, ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ, ರೈತ ಮುಖಂಡರಾದ ಶೇಖರ್ ಕುಂದರ್ ಮಾತನಾಡಿದರು.
ಡಿ.ವೈ.ಎಫ್.ಐ. ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಅಡ್ವಕೇಟ್ ನಿತಿನ್ ಕುತ್ತಾರ್, ಕಾರ್ಯದರ್ಶಿಯಾಗಿ ಕಾರ್ತಿಕ್ ದೆಸೋಡಿ ಆಯ್ಕೆ
ಇದೇ ವೇಳೆ ಮುನ್ನೂರು ಗ್ರಾಮದ 14 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಡ್ವಕೇಟ್ ನಿತಿನ್ ಕುತ್ತಾರ್, ಕಾರ್ಯದರ್ಶಿಯಾಗಿ ಕಾರ್ತಿಕ್ ದೆಸೋಡಿ, ಕೋಶಾಧಿಕಾರಿಯಾಗಿ ರಕ್ಷತ್ ಸಂತೋಷ್ ನಗರ, ಉಪಾಧ್ಯಕ್ಷರುಗಳಾಗಿ ದಿವ್ಯನ್ ತೇವುಲ, ಭರತ್ ರಾಜ್ ಕೆ., ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕುತ್ತಾರ್ ಅವರನ್ನು ಆಯ್ಕೆ ಮಾಡಲಾಯಿತು.
0 comments:
Post a Comment