ಮಂಗಳೂರು, ಸೆಪ್ಟೆಂಬರ್ 22, 2021 (ಕರಾವಳಿ ಟೈಮ್ಸ್) : ನಗರದ ಹೊರವಲಯ ಹರೇಕಳ-ಪಾವೂರು ಪ್ರದೇಶದಿಂದ ನಗರದ ಸ್ಟೇಟ್ ಬ್ಯಾಂಕ್ ವರೆಗೆ ನಿತ್ಯ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ಸು ಕಳೆದ ಕೊರೋನಾ ಲಾಕ್ ಡೌನ್ ಬಳಿಕ ತನ್ನ ಸೇವೆಯನ್ನು ನಿಲ್ಲಿಸಿದ ನಂತರ ಈವರೆಗೂ ಪುನಃರಾರಂಭ ಗೊಂಡಿರುವುದಿಲ್ಲ. ಇದರಿಂದಾಗಿ ಈ ಭಾಗದ ಜನಸಾಮಾನ್ಯರು ದಿನ ನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಕೂಡಲೇ ಸರಕಾರಿ ನರ್ಮ್ ಬಸ್ಸನ್ನು ಪುನರಾರಂಭಿಸಲು ಸಂಬಂಧಪಟ್ಟ ಸಾರಿಗೆ ಇಲಾಖಾ ಅಧಿಕಾರಿಗಳನ್ನು ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಒತ್ತಾಯಿಸಿದೆ.
ಬಹುತೇಕ ಬಡವರೇ ವಾಸಿಸುವ ಹರೇಕಳ ಸುತ್ತಮುತ್ತಲ ಭಾಗದ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಮತ್ತಿತರ ಕೆಲಸಗಳಿಗೆ ತೆರಳಲು ಬಹುತೇಕ ಸರಕಾರಿ ಬಸ್ಸನ್ನೇ ಅವಲಂಭಿಸುತ್ತಿದ್ದಾರೆ. ಈ ಮಧ್ಯೆ ಖಾಸಗೀ ಬಸ್ಸು ಪ್ರಯಾಣ ದರವು ವಿಪರೀತವಾಗಿ ಏರಿಕೆಯಾಗಿದ್ದು, ಸಂಚರಿಸದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವಿಪರೀತ ದರ ಏರಿಕೆಯ ಹೊರೆಯಿಂದ ತಪ್ಪಿಸಲು ಸರಕಾರಿ ಬಸ್ಸು ಬಹಳ ಉಪಯುಕ್ತವಾಗುತ್ತಿದ್ದು, ಆದರೆ ಸರಕಾರಿ ಬಸ್ಸು ಕಳೆದ ಒಂದು ವರುಷಗಳಿಂದ ಈ ಭಾಗದ ಜನರಿಗೆ ಸೇವೆಯನ್ನು ನೀಡದೇ ಇರೋದರಿಂದ ಸಮಯಕ್ಕೆ ಸರಿಯಾಗಿ ಅಗತ್ಯ ಸ್ಥಳಗಳಿಗೆ ಸಂಚರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಹರೇಕಳ ಪಾವೂರು ಕಡವಿನ ಬಳಿಯಿಂದ ನಗರದ ಸ್ಟೇಟ್ ಬ್ಯಾಂಕ್ ವರೆಗೆ ಸಂಚರಿಸುವ ಸರಕಾರಿ ನರ್ಮ್ ಕೆ.ಎಸ್.ಆರ್.ಟಿ.ಸಿ ಬಸ್ಸು ಪುನಃರಾರಂಭಿಸಬೇಕೆಂದು ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಸಾರಿಗೆ ಇಲಾಖೆಯನ್ನು ಒತ್ತಾಯಿಸುತ್ತಿದೆ ಎಂದು ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಲಚ್ಚಿಲ್ ಹಾಗೂ ಕಾರ್ಯದರ್ಶಿ ರಿಜ್ವಾನ್ ಖಂಡಿಗ ಪತ್ರಿಕಾ ಆಗ್ರಹಿಸಿದ್ದಾರೆ.
0 comments:
Post a Comment