ಬೆಂಗಳೂರು, ಸೆಪ್ಟಂಬರ್ 25, 2021 (ಕರಾವಳಿ ಟೈಮ್ಸ್) : ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ (ವಿಟಿಯು) ತನ್ನ ಅಧೀನದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಸ್ತುತ ವರ್ಷದಿಂದ ಬಯೋಲಜಿ ವಿಷಯವನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಲಾಗಿರುವ ಎಬಿಲಿಟಿ ಎನ್‍ಹ್ಯಾನ್ಸ್‍ಮೆಂಟ್ ಕೋರ್ಸಸ್ ಅಡಿಯಲ್ಲಿ ಈ ನೂತನ ವಿಷಯವನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಟಿಯು ಉಪಕುಲಪತಿ ಕರಿಸಿದ್ದಪ್ಪ, ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭ ಇಂಜಿನಿಯರ್ ಉದ್ಯೋಗಿಗಳು ವೈದ್ಯರ ಜೊತೆ ಸೇರಿಕೊಂಡು ಕಾರ್ಯನಿರ್ವಹಿಸುವ ಬೆಳವಣಿಗೆ ಕಂಡುಬಂಡಿತ್ತು. ವೈದ್ಯಕೀಯ ಉಪಕರಣ ಅಭಿವೃದ್ಧಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ವೈದ್ಯರ ಜೊತೆ ಎಂಜಿನಿಯರ್ ಗಳೂ ಸೇರಿಕೊಂಡಿದ್ದರು.
ಈ ನೂತನ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಉದ್ದೇಶದಿಂದ ಇಂಜಿನಿಯರಿಂಗ್ ಕಲಿಕೆಯ ಮಟ್ಟದಲ್ಲೇ ಬಯೋಲಜಿ ವಿಷಯ ಸೇರ್ಪಡೆಗೊಳಿಸುವುದರಿಂದ ಪ್ರತಿ ಇಂಜಿನಿಯರಿಂಗ್ ವಿದ್ಯಾರ್ಥಿ ವೈದ್ಯಕೀಯ ಕ್ಷೇತ್ರದಲ್ಲಿ ಎದುರಾಗಲಿರುವ ಸವಾಲುಗಳನ್ನು ಎದುರಿಸಬಹುದು ಎಂದಿದ್ದಾರೆ.
0 comments:
Post a Comment