ಬೆಳ್ತಂಗಡಿ, ಸೆಪ್ಟಂಬರ್ 21, 2021 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೊಲೀಸರ ಗಾಂಜಾ ಬೇಟೆ ಮುಂದುವರಿದಿದೆ. ಸೋಮವಾರ (ಸೆ 20) ಬೆಳ್ತಂಗಡಿ ಠಾಣಾ ಪಿಎಸ್ಸೈ ನಂದಕುಮಾರ್ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಳಂತಿಲ ಗ್ರಾಮದ ನೇಜಿಕಾರ್-ಅಟಂಬೊಟ್ಟು ನಿವಾಸಿ ದಿವಂಗತ ಹಸನಬ್ಬ ಅವರ ಪುತ್ರ ಮುಹಮ್ಮದ್ ಶಾಫಿ (29) ಎಂಬಾತನನ್ನು ಗಾಂಜಾ ಹಾಗೂ ಮೋಟಾರ್ ಸೈಕಲ್ ಸಹಿತ ದಸ್ತಗಿರಿ ಮಾಡಿದ್ದಾರೆ.
ಸೋಮವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಬೆಳ್ತಂಗಡಿ ಪಿಎಸ್ಸೈ ನಂದಕುಮಾರ್ ಅವರು ಠಾಣಾ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿರುವ ಹೊಂಡಾ ಸಿಬಿಆರ್ ಮೋಟಾರ್ ಸೈಕಲನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಆರೋಪಿ ಮಹಮ್ಮದ್ ಶಾಫಿ ಎಂಬಾತ ಯಾವುದೇ ಪರವಾನಿಗೆ ಇಲ್ಲದೇ ಗಾಂಜಾ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಬಳಿಯಿದ್ದ ಸುಮಾರು 71,925/- ರೂಪಾಯಿ ಮೌಲ್ಯದ 2 ಕೆಜಿ 55 ಗ್ರಾಂ ಗಾಂಜಾವನ್ನು ಹಾಗೂ ಸಾಗಾಟಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2021 ಕಲಂ 8 (ಸಿ), ಜೊತೆಗೆ 20 (ಬಿ)(11) ಎನ್.ಡಿ.ಪಿ.ಎಸ್. ಆಕ್ಟ್ 1985 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment