ಬಂಟ್ವಾಳ, ಸೆಪ್ಟೆಂಬರ್ 21, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಸುಜೀರು ನೇತ್ರಾವತಿ ನದಿಯಲ್ಲಿ ಮಂಗಳವಾರ ಅಪರಿಚಿತ ಗಂಡಸಿನ ಶವ ಪತ್ರೆಯಾಗಿದೆ.
ಸುಮಾರು 50 ರ ಹರೆಯದ ಆಸುಪಾಸಿನ ಗಂಡಸಿನ ಶವ ನೇತ್ರಾವತಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಿಯರ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಶವ ಮೇಲಕ್ಕೆತ್ತಿ ವಾರೀಸುದಾರರು ಇಲ್ಲದ ಹಿನ್ನಲೆಯಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಫ್ರೀಝರ್ ಗೆ ರವಾನಿಸಿ ಶೇಖರಿಸಿದ್ದಾರೆ.
ಮೃತರ ಗುರುತು-ಪರಿಚಯ ಅಥವಾ ವಾರೀಸುದಾರರಿದ್ದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರನ್ನು ಅಥವಾ ಠಾಣಾ ದೂರವಾಣಿ ಸಂಖ್ಯೆ 08255-235000 ನ್ನು ಸಂಪರ್ಕಿಸಬಹುದು.
0 comments:
Post a Comment