ಬಂಟ್ವಾಳ, ಸೆಪ್ಟೆಂಬರ್ 25, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಕೊಡಂಗೆ ಬಳಿ ಶುಕ್ರವಾರ ನಿಂತಿದ್ದ ಲಾರಿ ಏಕಾಏಕಿ ಚಲಿಸುತ್ತಿದ್ದ ವೇಳೆ ಲಾರಿಯನ್ನು ತಡೆದು ನಿಲ್ಲಿಸುವ ಉದ್ದೇಶದಿಂದ ಚಕ್ರಕ್ಕೆ ಕಲ್ಲು ಇಟ್ಟು, ಬಳಿಕ ಲಾರಿ ಏರಿ ನಿಲ್ಲಿಸುವ ಪ್ರಯತ್ನದಲ್ಲಿದ್ದಾಗ ಆಯತಪ್ಪಿ ಕೆಳಕ್ಕೆ ಚಾಲಕ ಬಾಲಪ್ಪ ಎ ಜವೂರು ಮೃತಪಟ್ಟಿದ್ದಾರೆ.
ಜಲ್ಲಿ ಲೋಡ್ ಮಾಡುತ್ತಿದ್ದ ಸಂದರ್ಭ ಲಾರಿ ಏಕಾಏಕಿ ಮುಂದಕ್ಕೆ ಚಲಿಸಿದ್ದು, ಈ ವೇಳೆ ಚಾಲಕ ಬಾಲಪ್ಪ ಅವರು ಲಾರಿಯ ಚಕ್ರದಡಿಗೆ ಕಲ್ಲು ಇಟ್ಟು ಲಾರಿ ಏರಿ ಚಲಿಸುವುದನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಲಾರಿಯ ಯಾವುದೋ ಭಾಗ ಅವರ ಶರೀರಕ್ಕೆ ತಾಗಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ರಕ್ತ ಕಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಕಕ್ಕೆಪದವು ನಿವಾಸಿ ಸಂದೀಪ್ ಕುಮಾರ್ ಅವರಿಗೆ ಸೇರಿದ ಪಿಕಪ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ನಿಂತಿದೆ. ಈ ಬಗ್ಗೆ ಸಂದೀಪ್ ಕುಮಾರ್ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2021 ಕಲಂ 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment