ಬಂಟ್ವಾಳ, ಸೆಪ್ಟಂಬರ್ 04, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಂಟ್ವಾಳ ಲೊರೊಟ್ಟೊಪದವು ಸಮೀಪದ ಬಾರೆಕಾಡು ಬಳಿ ಕೆಂಪು ಕಲ್ಲಿನ ಕೋರೆಗೆ ಬಿದ್ದು ಮೂಲತಃ ಪರ್ಲಿಯಾ ನಿವಾಸಿ ಸಾದಿಕ್ ಅವರ ಪುತ್ರ, 6ನೇ ತರಗತಿ ವಿದ್ಯಾರ್ಥಿ ಸವಾದ್ (12) ಶನಿವಾರ ಮೃತಪಟ್ಟಿದ್ದಾನೆ.
ಸ್ಥಳೀಯ ಮಕ್ಕಳು ಜೊತೆಯಾಗಿ ಇಲ್ಲಿನ ಕಲ್ಲಿನ ಕೋರೆಯ ನೀರಿನಲ್ಲಿ ಆಟವಾಡಲು ಶನಿವಾರ ತೆರಳಿದ್ದರು. ಈ ವೇಳೆ ಸವಾದ್ ಕಾಲು ಜಾರಿ ಕೋರೆ ಗುಂಡಿಯ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ
ಸವಾದ್ ಕಾಲು ಜಾರಿ ನೀರಿಗೆ ಬಿದ್ದ ಬಗ್ಗೆ ಇತರ ಮಕ್ಕಳು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳೀಯರು ಸ್ಥಳಕ್ಕೆ ತೆರಳಿ ಸವಾದ್ ನನ್ನು ಕೋರೆಯ ನೀರಿನಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದಾರಾದರೂ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರ ದಾಖಲಾಗಿದೆ.
0 comments:
Post a Comment