ಬಂಟ್ವಾಳ, ಸೆಪ್ಟೆಂಬರ್ 21, 2021 (ಕರಾವಳಿ ಟೈಮ್ಸ್) : ಮಂಗಳೂರು ಕ್ಯಾಥೊಲಿಕ್ ಕೋ ಆಪರೇಟಿವ್ ಬ್ಯಾಂಕ್ ಬಿ ಸಿ ರೋಡು ಶಾಖೆಯಿಂದ ವಾಹನದ ಡೀಲರ್ ಕಂಪೆನಿ ಹಾಗೂ ಇನ್ಶೂರೆನ್ಸ್ ಕಂಪೆನಿಯ ದಾಖಲೆಗಳನ್ನು ನೀಡಿ ವಾಹನ ಖರೀದಿಸದೆ ಸಾಲ ಪಡೆದು ವಂಚಿಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ನಿಝಾಮುದ್ದೀನ್, ಮಸೂದಾ ಬಾನು ಹಾಗೂ ಮುಹಮ್ಮದ್ ಕೆ ಎ ಅವರು 13 ಲಕ್ಷದ 20 ಸಾವಿರ ರೂಪಾಯಿ ಸಾಲ ಪಡೆದುಕೊಂಡು ಬ್ಯಾಂಕಿಗೆ ವಂಚಿಸಿರುವ ಬಗ್ಗೆ ಬ್ಯಾಂಕಿನ ಬಿ ಸಿ ರೋಡು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಎಡ್ನಾ ನೊರೊನ್ಹಾ ಅವರು ನೀಡಿದ ಖಾಸಗಿ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2021 ಕಲಂ 406, 417, 420, 465, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment