ಬಂಟ್ವಾಳ, ಸೆಪ್ಟೆಂಬರ್ 29, 2021 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ನಾವೂರು ರಸ್ತೆ ನಿವಾಸಿ ಪದ್ಮಶೇಖರ್ ಜೈನ್ ಬಿನ್ ನೇಮಿರಾಜ ಪೂವಣಿ ಅವರಿಗೆ ಸೇರಿದ ದನ ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದ್ಮಶೇಖರ ಜೈನ್ ಸೆ 24 ರಂದು ತಮ್ಮ ದನವನ್ನು ಗುಡ್ಡಕ್ಕೆ ಮೇಯಲು ಬಿಟ್ಟಿದ್ದು, ಸಂಜೆಯಾದರೂ ಮರಳಿ ಹಟ್ಟಿಗೆ ಬಂದಿರುವುದಿಲ್ಲ. ಈ ಬಗ್ಗೆ ಹುಡುಕಾಡಿದರೂ ಕಂಡು ಬಂದಿಲ್ಲ. ಈ ಬಗ್ಗೆ ನೆರೆಕರೆಯವರಲ್ಲಿ ವಿಚಾರಿಸಿದಾಗ ರಾತ್ರಿ ಸುಮಾರು 11 ಗಂಟೆ ವೇಳೆಗೆ ಮನೆಯ ಪಕ್ಕದ ನಾವೂರು ಬೀದಿ ಗೋಪಲಾಕೃಷ್ಣ ದೇವಸ್ಥಾನದ ಬಳಿ ಮಲಗಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪದ್ಮಶೇಖರ್ ಅವರು ದೇವಸ್ಥಾನದ ಬಳಿ ತೆರಳಿದಾಗ ಅಲ್ಲಿಯೂ ದನ ಕಾಣದಾದಾಗ ಅಲ್ಲಿಯೂ ಪಕ್ಕದ ಮನೆಯವರಲ್ಲಿ ವಿಚಾರಿಸಿದ್ದು, ಸುಮಾರು 12 ಗಂಟೆ ಸಮಯಕ್ಕೆ ಯಾವುದೋ ಒಂದು ವಾಹನ ದೇವಸ್ಥಾನದ ಬಳಿ ನಿಂತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದು, ಅಲ್ಲದೆ ಪಕ್ಕದ ಮನೆಯ ಇನ್ನೆರಡು ದನಗಳೂ ಕಾಣೆಯಾಗಿದೆ ಎಂದು ತಿಳಿಸಿದ ಹಿನ್ನಲೆಯಲ್ಲಿ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಸಂಶಯ ಪಟ್ಟ ಪದ್ಮಶೇಖರ ಅವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment