ಬಂಟ್ವಾಳ, ಸೆಪ್ಟಂಬರ್ 26, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ವತಿಯಿಂದ ಅಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ ಭಾನುವಾರ (ಸೆಪ್ಟೆಂಬರ್ 26) ಫ್ರೆಂಡ್ಸ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ವಿಜಯ ಕುಮಾರ್ ನಂದರಬೆಟ್ಟು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮಂಗಳಾ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ನೇಮಿರಾಜ ಶೆಟ್ಟಿ ಉದ್ಘಾಟಿಸಿದರು. ಸೇವಾ ಸಿಂಧು ಕೇಂದ್ರದ ರಮೇಶ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಮೋನಪ್ಪ ಪೂಜಾರಿ ಅಲೆತ್ತೂರು, ಭಾಸ್ಕರ ಕುಲಾಲ್ ಬಿ.ಸಿ.ರೋಡು, ವಿಶ್ವನಾಥ ರೈ, ದಿನೇಶ್ ಸುವರ್ಣ, ಪ್ರಶಾಂತ್ ಮೊದಲಾದವರು ಭಾಗವಹಿಸಿದ್ದರು. ಚಂದ್ರಪ್ರಕಾಶ್ ಅಲೆತ್ತೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment