ಬಂಟ್ವಾಳ, ಸೆಪ್ಟಂಬರ್ 21, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಮಾಂಬಾಡಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಶಾಲೆಯಲ್ಲಿ ನಡೆದ ಪೆÇೀಷಕರ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಮಮತಾ ಕುಪ್ಪಿಲ, ಸದಸ್ಯರಾಗಿ ರೋಷನ್ ಡಿ’ಸೋಜ, ಕೇಶವ ನಾಯಕ್, ಪ್ರೇಮಾ, ಸುಜಾತಾ, ಶಿಲ್ಪಾ, ವಿನುತಾ, ವನಿತಾ, ಕುಮುದಾಕ್ಷಿ, ಸುನಂದಾ, ಜ್ಯೋತಿ, ಗಣೇಶ್ ಟಿ, ರಾಜೇಂದ್ರ, ಪಾಂಡು ಮಾದರ, ದೀಪಕ್, ಪ್ರಭಾಕರ್, ರಾಜೇಶ್ವರಿ ಆಯ್ಕೆಗೊಂಡರು.
ನಾಮನಿರ್ದೇಶಿತ ಸದಸ್ಯರಾಗಿ ಶಾಲಾ ಮುಖ್ಯ ಶಿಕ್ಷಕಿ ಕುಶಲ ಎ, ಕಾರ್ಯದರ್ಶಿಯಾಗಿ ಪುರಸಭಾ ಸದಸ್ಯೆ ವಿದ್ಯಾವತಿ, ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷ ಉದಯ ಅಮೀನ್, ಹಿರಿಯ ಸಹಾಯಕ ಶಿಕ್ಷಕಿ ತಾಹಿರಾ ಬಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸ್ಥಳೀಯ ಆರೋಗ್ಯ ಕಾರ್ಯಕರ್ತೆ ನೇಮಕಗೊಂಡರು. ಇದೇ ಸಂದರ್ಭ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪಠ್ಯ ಪುಸ್ತಕ ವಿತರಿಸಲಾಯಿತು. ಶಿಕ್ಷಕ ನವೀನ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment