ಮಂಗಳೂರು, ಸೆಪ್ಟೆಂಬರ್ 21, 2021 (ಕರಾವಳಿ ಟೈಮ್ಸ್) : ಮಂಗಳೂರಿನ ಪಂಪ್ ವೆಲ್ ಸರ್ಕಲ್ ಬಳಿ 2014 ರಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ದ್ವಿ ಚಕ್ರ ವಾಹನಕ್ಕೆ ಹಾಗೂ ಪಾದಚಾರಿಗೆ ಡಿಕ್ಕಿ ಹೊಡೆದು ದ್ವಿ ಚಕ್ರ ವಾಹನ ಸವಾರ ಹಾಗೂ ಪಾದಾಚಾರಿ ಮೃತಪಟ್ಟು ಎರಡು ಜನ ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಸ್ ಚಾಲಕನನ್ನು ಖುಲಾಸೆಗೊಳಿಸಿ ಮಂಗಳೂರು ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಅಪಘಾತ ಕ್ಕೆ ಕಾರಣವಾದ ಕೆ.ಎಸ್.ಆರ್.ಟಿ.ಸಿ ಚಾಲಕನ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿ ಮಂಗಳೂರಿನ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣದ ಸುದೀರ್ಘ ವಿಚಾರಣೆ ನಡೆದು ಪ್ರಕರಣದಲ್ಲಿ ಆರೋಪಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮಹಾಗುಂಡಪ್ಪ ಕೆಂದರೂ ಅವರನ್ನು ದೋಷಮುಕ್ತಗೊಳಿಸಿ ಮಂಗಳೂರು ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವಿನಿ ಕೋರೆಯವರು ಆದೇಶ ನೀಡಿದ್ದಾರೆ.
ಆರೋಪಿತ ಬಸ್ ಚಾಲಕನ ಪರವಾಗಿ ಬಂಟ್ವಾಳದ ಹಿರಿಯ ನೋಟರಿ-ನ್ಯಾಯವಾದಿ ಸುರೇಶ್ ಪೂಜಾರಿ ವಾದಿಸಿದ್ದರು.
0 comments:
Post a Comment