ಬಂಟ್ವಾಳ, ಸೆಪ್ಟೆಂಬರ್ 01, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು 24ನೇ ವಾರ್ಡಿಗೆ ಸಂಬಂಧಪಟ್ಟ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ, ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರ ನೇತೃತ್ವದಲ್ಲಿ 2ನೆ ಹಂತದ ಕೋವಿಡ್ ವ್ಯಾಕ್ಸಿನ್ ಶಿಬಿರ ಬೋಗೋಡಿ ಸರಕಾರಿ ಕಿರಿಯ ಶಾಲೆಯಲ್ಲಿ ಬುಧವಾರ (ಸೆ. 1ರಂದು) ನಡೆಯಿತು.
ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ ಅಶ್ವಿನಿ ಅವರ ನೇತೃತ್ವದ ತಂಡ ಈ ಶಿಬಿರ ನಡೆಸಿಕೊಟ್ಟಿತು. ಶಿಬಿರದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಅಕ್ಷತಾ, ಸಂಧಿಕಾ, ಆಶಾ ಕಾರ್ಯಕರ್ತೆ ಶೋಭಾ, ಶಿಕ್ಷಕಿ ವಿನ್ನಿಫ್ರೆಡ್ ಹಾಗೂ ವಾರ್ಡಿನ ಟಾಸ್ಕ್ ಫೋರ್ಸ್ ಸದಸ್ಯರುಗಳು ಭಾಗವಹಿಸಿದ್ದರು.
ಬುಧವಾರ (ಸೆ 01) ನಡೆದ ಶಿಬಿರದಲ್ಲಿ 225 ಡೋಸ್ ಲಸಿಕೆ ನೀಡಲಾಗಿದ್ದರೆ, ಶನಿವಾರ (ಆ 28) ನಡೆದ ಮೊದಲನೇ ಹಂತದ ಶಿಬಿರದಲ್ಲಿ 303 ಡೋಸ್ ಲಸಿಕೆ ನೀಡಲಾಗಿದೆ. ಎರಡೂ ಶಿಬಿರಗಳಿಂದ ಪರಿಸರದ ಒಟ್ಟು 528 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
0 comments:
Post a Comment