ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಡಿ.ವೈ.ಎಫ್.ಐ ಕೆಲಿಂಜ ಘಟಕದ ವತಿಯಿಂದ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯರಾದ ವಿ.ಕೆ. ಯೂಸುಫ್ ಕೆಲಿಂಜ ದ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಸಿ.ಪಿಐ.(ಎಂ) ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಕಾಪೆರ್Çೀರೇಟ್ ಕಂಪನಿಗಳ ವಿರುದ್ದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಯುವಜನತೆ ಸಜ್ಜಾಗಬೇಕೆಂದು ಕರೆ ನೀಡಿದರು.
ಡಿ.ವೈ.ಎಫ್.ಐ ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ ಮಾತನಾಡಿ ಅಂದು ಸ್ವಾತಂತ್ರ್ಯ ಚಳುವಳಿಯ ಸಂಧರ್ಭದಲ್ಲಿ ಇದ್ದ ಆಶಯಗಳು ಇನ್ನೂ ಈಡೇರಿಲ್ಲ, ಯುವಜನತೆ ನಿರುದ್ಯೋಗದಿಂದ ಸಂಕಷ್ಟದಲ್ಲಿದ್ದು ಡಿ.ವೈ.ಎಫ್.ಐ ಉದ್ಯೋಗದ ಹಕ್ಕಿಗಾಗಿ ಪ್ರಬಲ ಹೋರಾಟವನ್ನು ನಡೆಸುತ್ತಿದ್ದು ಯುವಜನತೆ ಹೋರಾಟದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಕೃಷಿ ಕಾಯ್ದೆಗಳ ತಿದ್ದುಪಡಿಯ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ರೈತ ಹೋರಾಟಗಾರರಿಗೆ ಈ ಸಂಧರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ಹಿರಿಯರಾದ ಕುಂಞಮೋನು, ಡಿ.ವೈ.ಎಫ್‍ಐ ಕೆಲಿಂಜ ಘಟಕದ ಗೌರವಾಧ್ಯಕ್ಷ ಸುಲೈಮಾನ್ ಪೆಲತ್ತಡ್ಕ, ವಿಟ್ಲ ವಲಯ ಸಮಿತಿ ಮುಖಂಡರುಗಳಾದ ಸಲ್ಮಾನ್ ಪಿ.ಬಿ., ಮಹಮ್ಮದ್ ಇರ್ಪಾನ್, ಶಮೀರ್ ಪಾತ್ರತೋಟ, ಸಿನಾನ್, ತೌಸೀಪ್ ಪೆಲತ್ತಡ್ಕ, ಹನೀಫ್ ಕೆಲಿಂಜ, ಅಝೀಜ್ ಕೆಲಿಂಜ, ರೋಶನ್ ಪಾಯಸ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment