ಬಂಟ್ವಾಳ, ಆಗಸ್ಟ್ 29, 2021 (ಕರಾವಳಿ ಟೈಮ್ಸ್) : ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ 3,000/- ರೂಪಾಯಿಯನ್ನು ಕಲ್ಯಾಣ ಮಂಡಳಿಯಿಂದ ನೀಡಲು ಆದೇಶವಾಗಿದ್ದು, ಪರಿಹಾರ ಹಣ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಸಿಕ್ಕಿದ್ದು, ಹೆಚ್ಚಿನ ನೋಂದಾಯಿತ ಕಾರ್ಮಿಕರಿಗೆ ಸಿಗದೆ ಅನ್ಯಾಯವಾಗಿದೆ. ಅಲ್ಲದೆ ಕಲ್ಯಾಣ ಮಂಡಳಿಯಿಂದ ಪ್ರತಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಾಗಿದ್ದು, ಆಹಾರ ಕಿಟ್ ಎಲ್ಲಾ ಕಾರ್ಮಿಕರಿಗೆ ನೀಡುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಆಹಾರ ಕಿಟ್ ವಿತರಣೆಯಲ್ಲಿ ಮದ್ಯ ಪ್ರವೇಶಿಸಿ ತಮ್ಮ ಬೆಂಬಲಿಗರಿಗೆ ಮಾತ್ರ ಆಹಾರ ಕಿಟ್ ವಿತರಿಸಿ ನಿಜವಾದ ನೋಂದಾಯಿತ ಕಾರ್ಮಿಕರಿಗೆ ಅನ್ಯಾಯವೆಸಗಿದ್ದಾರೆ.
ಕೂಡಲೇ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ ಹಾಗೂ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ವತಿಯಿಂದ ಪ್ರತೀ ಗ್ರಾಮ ಮಟ್ಟದಲ್ಲಿ ಪ್ರತಿಭಟನೆಗೆ ತೀರ್ಮಾನಿಸಲಾಗಿದ್ದು, ಇದರ ಭಾಗವಾಗಿ ವೀರಕಂಭದಲ್ಲಿ ಕಟ್ಟಡ ಕಾರ್ಮಿಕರ ಸಮಿತಿ ರಚನಾ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಸಂಘಟನೆಗಳ ಹೋರಾಟದಿಂದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಿದ್ದು. ಈಗ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖ್ಯ ಅತಿಥಿಯಾಗಿ ಕಾರ್ಮಿಕ ಮುಖಂಡ ಲಿಯಾಖತ್ ಖಾನ್ ಭಾಗವಹಿಸಿದ್ದರು. ಇದೇ ವೇಳೆ ನೂತನ ಗ್ರಾಮ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಜನಾರ್ಧನ ಸಾಲ್ಯಾನ್, ಉಪಾದ್ಯಕ್ಷರುಗಳಾಗಿ ಮೋನಪ್ಪ ಪೂಜಾರಿ, ಅನಂತೇಶ್ ಕೆಲಿಂಜ, ಕಾರ್ಯದರ್ಶಿಯಾಗಿ ಸುನಿಲ್, ಜೊತೆ ಕಾರ್ಯದರ್ಶಿಗಳಾಗಿ ಕೃಷ್ಣ ಎ, ಜಗದೀಶ ಕೆಲಿಂಜ, ಕೋಶಧಿಕಾರಿಗಳಾಗಿ ಉಮೇಶ್ ಪೂಜಾರಿ ಸಹಿತ ಇತರ 20 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೇಮಿಸಲಾಯಿತು.
0 comments:
Post a Comment