ಬಂಟ್ವಾಳ, ಆಗಸ್ಟ್ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಸರಕಾರಿ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ವ್ಯಾಕ್ಸಿನ್ ಶಿಬಿರ ಶನಿವಾರ (ಆಗಸ್ಟ್ 27) ನಡೆಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಮನಾ ಕುಮಾರಿ ಕ್ರಾಸ್ತಾ, ಆರೋಗ್ಯ ನಿರೀಕ್ಷಣಾಧಿಕಾರಿ ಪವನ್ ಕುಮಾರ್, ಆಶಾ ಕಾರ್ಯಕರ್ತೆಯರಾದ ಪ್ರಮೀಳಾ ಹಾಗೂ ಮೀನಾಕ್ಷಿ ಶಿಬಿರ ನಡೆಸಿಕೊಟ್ಟರು.
ಈ ಸಂದರ್ಭ ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯರುಗಳಾದ ಯೂಸುಫ್ ಕರಂದಾಡಿ, ಕಬೀರ್ ಬಾವಾ ಆಲಾಡಿ, ಹೇಮಾವತಿ ಕರಂದಾಡಿ, ಪ್ರಮುಖರಾದ ಶರೀಫ್ ಟಿ, ಇಬ್ರಾಹಿಂ ಮಲಾಯಿಬೆಟ್ಟು, ಅಶ್ರಫ್ ಆಲಾಡಿ, ಮನೋಜ್ ವರಕಾಯಿ, ರಾಜೇಶ್ ಮಲಾಯಿಬೆಟ್ಟು, ಅಬೂಬಕ್ಕರ್, ಇಕ್ಬಾಲ್ ಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 200 ಡೋಸ್ ವ್ಯಾಕ್ಸಿನ್ ನೀಡಲಾಯಿತು.
Yedde vishaya...
ReplyDelete