ಮಂಗಳೂರು, ಆಗಸ್ಟ್ 06, 2021 (ಕರಾವಳಿ ಟೈಮ್ಸ್) : ಪಿ.ಎಂ. ಕನ್ಯಾ ಯೋಜನೆ ಎಂಬ ಯೋಜನೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶವೊಂದು ಕಳೆದ ಕೆಲ ದಿನಳಿಂದ ಸಕತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಗೊಂದಲಕ್ಕೀಡಾಗಿರುವ ಸಾರ್ವಜನಿಕರು ಅಂಚೆ ಕಚೇರಿಗಳಿಗೆ ನಿರಂತರವಾಗಿ ಭೇಟಿ ನೀಡಿ ವಿಚಾರಿಸುತ್ತಿರುವುದು ಕಂಡು ಬರುತ್ತಿದೆ.
ಇಂತಹ ಯಾವುದೇ ಯೋಜನೆಯನ್ನು ಕೇಂದ್ರ ಅಥವಾ ರಾಜ್ಯ ಸರಕಾರಗಳು ಇದುವರೆಗೆ ಜಾರಿಗೊಳಿಸಿರುವುದಿಲ್ಲ. ಸಾರ್ವಜನಿಕರು ಈ ಯೋಜನೆಯ ಹೆಸರಿನಲ್ಲಿ ಮೋಸ ಹೋಗದಿರುವಂತೆ ಮಂಗಳೂರು ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.
0 comments:
Post a Comment