ಬಂಟ್ವಾಳ, ಆಗಸ್ಟ್ 04, 2021 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಮಾಹಿತಿ ಹಾಗೂ ಬೀಜದುಂಡೆ ತಯಾರಿ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಮೀಪದ ಕುಂಟಲಪಳಿಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ತಾಲೂಕು ಕೃಷಿ ಅಧಿಕಾರಿ ಜನಾರ್ದನ ಪರಿಸರ ಸಂರಕ್ಷಣೆ ಮಹತ್ವ ಹಾಗೂ ಬೀಜದುಂಡೆ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 65 ಮಂದಿ ಸದಸ್ಯರು ಪಾಲ್ಗೊಂಡಿದ್ದು, ಬೇರೆ ಬೇರೆ ಜಾತಿಯ ಬೀಜಗಳಿಂದ ಸುಮಾರು 1000 ಬೀಜದುಂಡೆ ತಯಾರಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಕೇಶವ, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸ್ವಪ್ನ, ಬಂಟ್ವಾಳ ವಲಯ ಒಕ್ಕೂಟ ಅಧ್ಯಕ್ಷ ವಸಂತ ಮೂಲ್ಯ, ಅಲ್ಲಿಪಾದೆ ಒಕ್ಕೂಟ ಅಧ್ಯಕ್ಷ ತಿಲಕ್ ಶಾಂತಿ, ದೇವಸ್ಯಪಡೂರು ಒಕ್ಕೂಟ ಅಧ್ಯಕ್ಷ ವಿಶ್ವನಾಥ್ ಕುಲಾಲ್, ಸೇವಾ ಪ್ರತಿನಿಧಿ ವಸಂತಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment