ಬಂಟ್ವಾಳ, ಆಗಸ್ಟ್ 03, 2021 (ಕರಾವಳಿ ಟೈಮ್ಸ್) : ರ್ಯಾಪಿಡ್ ಆಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯ ಪಡೆ) ಸಿಬ್ಬಂದಿಗಳಿಗೆ ಪ್ರದೇಶ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರ ಬಂಟ್ವಾಳ ತಾಲೂಕಿನ ಬಂಟ್ವಾಳ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಕೈಕಂಬ, ಬಿ ಸಿ ರೋಡು, ಮೆಲ್ಕಾರ್, ಕಲ್ಲಡ್ಕ ಹಾಗೂ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ.
ಈ ಪಥ ಸಂಚಲನಕ್ಕೆ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಕೆಎಸ್‍ಆರ್‍ಪಿ ಪೊಲೀಸರು ಸಾಥ್ ನೀಡಿದ್ದಾರೆ. ರ್ಯಾಪಿಡ್ ಆಕ್ಷನ್ ಫೋರ್ಸಿನ ಈ ತುಕಡಿ ವಾರ ಕಾಲ ದಕ್ಷಿಣ ಕನ್ನಡ ಜಿಲ್ಲೆಯರಲಿದ್ದು, ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಜೊತೆಗೂಡಿ ರೂಟ್ ಮಾರ್ಚ್ ನಡೆಸಲಿದ್ದಾರೆ ಹೊರತು ಇತರ ಯಾವುದೇ ಉದ್ದೇಶಕ್ಕಾಗಿ ಅಲ್ಲ ಎಂದು ಜಿಲ್ಲಾ ಎಸ್ಪಿ ಋಷಕೇಶ್ ಸೊನಾವಣೆ ಭಗವಾನ್ ತಿಳಿಸಿದ್ದಾರೆ.
0 comments:
Post a Comment