ಬಂಟ್ವಾಳ, ಆಗಸ್ಟ್ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪೂಂಜಾಲಕಟ್ಟೆ ಪೇಟೆಯಲ್ಲಿ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪೇರಡೆ ನಿವಾಸಿ ಅಣ್ಣಿ ಹೆಗ್ಡೆ ಅವರ ಪುತ್ರ ಕಿರಣ್ ಕುಮಾರ್ ಯಾನೆ ರಮಾನಂದ (29) ಅವರು ಗುರುವಾರ ರಾತ್ರಿ ಸುಮಾರು 10.30 ಗಂಟೆ ವೇಳೆಗೆ ಬೈಕಿನಲ್ಲಿ ಸಂಚರಿಸುತ್ತಿರುವ ವೇಳೆ ಸುಮಾರು ಎಂಟರಿಂದ ಹತ್ತು ಮಂದಿಯ ಅಪರಿಚಿತರ ತಂಡ ತಡೆದು ನಿಲ್ಲಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ಕಿರಣ್ ಈ ಬಗ್ಗೆ ಪೂಂಜಾಲಕಟ್ಟೆಯಲ್ಲಿ ದೂರು ದಾಖಲಿಸಿದ್ದು, ಆ ಪ್ರಕಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2021 ಕಲಂ 143, 147, 148, 341, 323, 324, 504, 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
0 comments:
Post a Comment