ಮಂಗಳೂರು, ಆಗಸ್ಟ್ 12, 2021 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದಲ್ಲಿ 2 ಪ್ರಧಾನ ಅಂಚೆ ಕಛೇರಿಗಳಲ್ಲಿ ಹಾಗೂ 37 ಉಪ ಅಂಚೆ ಕಛೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಸೇವೆಗಳು ಲಭ್ಯವಿವೆ. ಅಲ್ಲದೇ ಅಂಚೆ ಕಛೇರಿಗಳಲ್ಲಿ ಅಂಚೆಯಣ್ಣನ ಮೂಲಕ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಜೋಡಣೆ ಸೇವೆಯೂ ಲಭ್ಯವಿದೆ.
ಕೆಲವೊಂದು ಅಂಚೆ ಕಛೇರಿಗಳ ಸಮೀಪದಲ್ಲಿ ಮಧ್ಯವರ್ತಿಗಳು ಜನರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಆಧಾರ್ ಸಹಿತವಾಗಿ ಯಾವುದೇ ಅಂಚೆ ಸೇವೆ ನೀಡಲು ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.
ನಿಯಾಮಾವಳಿಯಂತೆ ಹೊಸ ಆಧಾರ್ ನೋಂದಣಿ ಉಚಿತ, 5 ಹಾಗೂ 15 ವರ್ಷದ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ ಉಚಿತ, ಬಯೋಮೆಟ್ರಿಕ್ ಅಪ್ ಡೇಟ್ (5 ಹಾಗೂ 15 ವರ್ಷದ ಮಕ್ಕಳನ್ನು ಹೊರತು ಪಡಿಸಿ) 100/- ರೂಪಾಯಿ, ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ತಿದ್ದುಪಡಿ ರೂ 50 ಇವುಗಳನ್ನು ಹೊರತು ಇತರ ಯಾವುದೇ ಶುಲ್ಕ ಇರುವುದಿಲ್ಲ.
ಅಂಚೆ ಕಛೇರಿಯಲ್ಲಿ ಪಡೆಯುವ ಮೇಲ್ಕಾಣಿಸಿದ ನಿಗದಿತ ಶುಲ್ಕ ಸ್ವೀಕೃತಿ ಪತ್ರದಲ್ಲೇ ನಮೂದಾಗಿರುತ್ತದೆ. ಇವುಗಳ ಹೊರತು ಯಾವುದೇ ಅಂಚೆ ಕಛೇರಿಗಳ ಸಮೀಪ ಅಥವಾ ಆವರಣದಲ್ಲಿ ಮಧ್ಯವರ್ತಿಗಳು ಕಂಡು ಬಂದಲ್ಲಿ ಸಾರ್ವಜನಿಕರು ಕಚೇರಿಗೆ ದೂರು ನೀಡತಕ್ಕದ್ದು. ಕಛೇರಿಯ ವಾಟ್ಸಪ್ ಸಂಖ್ಯೆ 9448291072 ಅಥವಾ ಇಮೇಲ್ ಐಡಿ domangalore.ka@indiapost.gov.in ನ್ನು ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ವಿಭಾಗದ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment