ಬಂಟ್ವಾಳ, ಆಗಸ್ಟ್ 17, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್, ಪಾಣೆಮಂಗಳೂರು ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೆಸ್, ವಲಯ ಕಾಂಗ್ರೆಸ್ ಕಳ್ಳಿಗೆ, ಮಹಿಳಾ ಕಾಂಗ್ರೆಸ್, ಮತ್ತು ಯುವ ಕಾಂಗ್ರೆಸ್ ಕಳ್ಳಿಗೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಮಾಜಿ ಸೈನಿಕರಿಗೆ ಗೌರವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಕಾಂಗ್ರೆಸ್ ಪಕ್ಷದ ಪಾತ್ರದ ಬಗ್ಗೆ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕ ಆಲ್ವಿನ್ ಎಲಿಯಾಸ್ ಲೋಬೊ ಅವರು, ಪ್ರತಿಯೊಬ್ಬ ವ್ಯಕ್ತಿಯೂ ಒಬ್ಬ ಸೈನಿಕ, ಪ್ರತಿಯೊಬ್ಬ ಪ್ರಜೆಯೂ ಅವರವರ ಧರ್ಮ ಆಹಾರ ಪದ್ಧತಿಯನ್ನು ಅನುಸರಿಸುವ ಹಕ್ಕು ಹೊಂದಿದ್ದಾರೆ ಎಂದರು.
ದ ಕ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ರೋಶನ್ ಕೆ ರೈ, ಎಪಿಎಂಸಿ ಮಾಜಿ ಸದಸ್ಯ ದಿವಾಕರ ಪಂಬದಬೆಟ್ಟು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಧುಸೂಧನ್ ಶೆಣೈ, ತಾ ಪಂ ಸದಸ್ಯ ಶಿವಪ್ರಸಾದ್, ಹಿರಿಯರಾದ ಕೋಸ್ಟಲ್ ಹಮೀದ್, ಮಾನೂರು ಹಸನಬ್ಬ, ಪಂಚಾಯತ್ ಸದಸ್ಯರಾದ ರವಿರಾಜ್ ಜೈನ್, ವಿಜಯ್ ಡಿ’ಸೋಜಾ, ಪುಷ್ಪಲತಾ ಯೋಗೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲೀನಾ ಮೊಂತೆರೋ ಮೊದಲಾದವರು ಭಾಗವಹಿಸಿದ್ದರು.
ಕು ಪೂಜಾ ಮತ್ತು ತಂಡ ದೇಶಭಕ್ತಿ ಗೀತೆ, ದ್ವಜಗೀತೆ ಹಾಡಿದರು. ಮನೋಜ್ ಕನಪಾಡಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment