ಬಂಟ್ವಾಳ, ಆಗಸ್ಟ್ 30, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯ ಎಂ ಹಮೀದ್ ಮುನ್ನೂರು 74) ಅವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮಲ್ಪೆಯಲ್ಲಿ ಹೂವಿನ ವ್ಯಾಪಾರಿಯಾಗಿದ್ದ ಇವರು ಮಲಾಯಿಬೆಟ್ಟು ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಆಲಾಡಿ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ನಾಲ್ಕು ಮಂದಿ ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ವಲಯ ಕಾಂಗ್ರೆಸ್ ಸಂತಾಪ
ಪಂಚಾಯತ್ ಮಾಜಿ ಸದಸ್ಯ ಹಮೀದ್ ಅವರ ಹಠಾತ್ ನಿಧನಕ್ಕೆ ಸಜಿಪಮುನ್ನೂರು ವಲಯ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಗ್ರಾಮದ ಜನಪ್ರತಿನಿಧಿಯಾಗಿ ಸರ್ವ ಜನಾಂಗದ ಜನರ ಆಗು-ಹೋಗುಗಳಿಗೆ ಸ್ಸಂದಿಸುತ್ತಿದ್ದ ಇವರ ಹಠಾತ್ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಹೇಳಿಕೆಯಲ್ಲಿ ತಿಳಿಸಿರುವ ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಅವರು ಹಮೀದಾಕ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಅಲ್ಲಾಹು ದಯಪಾಲಿಸಲಿ ಹಾಗೂ ಅವರ ಪಾರತ್ರಿಕ ಜೀವನ ಸುಖಮಯಗೊಳಿಸಲಿ ಎಂದು ಪ್ರಾರ್ಥಿಸಿದ್ದಾರೆ.
0 comments:
Post a Comment