ನವದೆಹಲಿ, ಆಗಸ್ಟ್ 25, 2021 (ಕರಾವಳಿ ಟೈಮ್ಸ್) : ಈಗಾಗಲೇ ಕೋವಿಡ್ ಲಸಿಕಾ ಪ್ರಮಾಣ ಪತ್ರ ವಾಟ್ಸಪ್ ಮೂಲಕ ನೀಡಿ ಸೈ ಎನಿಸಿಕೊಂಡಿರುವ ಮೈ ಗವ್ ಕೊರೊನಾ ಸಹಾಯವಾಣಿ (MyGov Corona Helpdesk) ಇದೀಗ ಮತ್ತೊಂದು ಸೇವೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಮೈ ಗವ್ ಕೊರೊನಾ ಸಹಾಯವಾಣಿ ಸಹಾಯದಿಂದ ಇನ್ನು ಮುಂದೆ ವಾಟ್ಸಾಪ್ ಬಳಕೆದಾರರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳ ಮಾಹಿತಿ ಪಡೆಯಬಹುದು ಮತ್ತು ಆ ಕೇಂದ್ರದಲ್ಲಿ ಲಸಿಕೆಯನ್ನು ಬುಕ್ ಮಾಡಬಹುದು.
ಅಗಸ್ಟ್ 5 ರಂದು ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಮುಂದಾಗಿದೆ.
ನಾಗರಿಕರು ಕೊರೊನಾ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಲು ಮೈ ಗವ್ ಕೊರೊನಾ ಸಹಾಯವಾಣಿ ಅಧಿಕೃತ ಮೂಲವಾಗಿದೆ. ಮೈ ಗವ್ ಕೊರೊನಾ ಸಹಾಯವಾಣಿ ಸೇವೆಯನ್ನು ಪಡೆದುಕೊಳ್ಳಲು ವಾಟ್ಸಾಪ್ ಬಳಕೆದಾರರು +91 9013151515 ಈ ವಾಟ್ಸಾಪ್ ನಂಬರನ್ನು ತಮ್ಮ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳಬೇಕು. ಲಸಿಕೆ ಬುಕ್ ಮಾಡಲು ಈ ಸಂಖ್ಯೆಗೆ Book Slot ಎಂದು ಟೈಪ್ ಮಾಡಿ ಕಳಿಸಬೇಕು. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲ್ಪಡುತ್ತದೆ. ಅದನ್ನು ನಮೂದಿಸಿದರೆ ನಂತರ ನಿಮಗೆ ಬೇಕಾದ ದಿನಾಂಕ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.
0 comments:
Post a Comment