ಕಾರ್ಮಿಕರಿಗೆ ಪಂಚಾಯತ್ ಮೂಲಕ ನ್ಯಾಯೋಚಿತವಾಗಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳಿ : ಬಂಟ್ವಾಳ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದಿಂದ ಮನವಿ - Karavali Times ಕಾರ್ಮಿಕರಿಗೆ ಪಂಚಾಯತ್ ಮೂಲಕ ನ್ಯಾಯೋಚಿತವಾಗಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳಿ : ಬಂಟ್ವಾಳ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದಿಂದ ಮನವಿ - Karavali Times

728x90

5 August 2021

ಕಾರ್ಮಿಕರಿಗೆ ಪಂಚಾಯತ್ ಮೂಲಕ ನ್ಯಾಯೋಚಿತವಾಗಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳಿ : ಬಂಟ್ವಾಳ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದಿಂದ ಮನವಿ

ಬಂಟ್ವಾಳ, ಆಗಸ್ಟ್ 05, 2021 (ಕರಾವಳಿ ಟೈಮ್ಸ್) : ಕಾರ್ಮಿಕ ಕಲ್ಯಾಣ ಮಂಡಳಿ ನೋಂದಾಯಿತ ಕಾರ್ಮಿಕರಿಗೆ ವಿತರಿಸುತ್ತಿರುವ ಕೋವಿಡ್ ಪರಿಹಾರ ಆಹಾರ ಕಿಟ್ ವಿತರಣೆಯಲ್ಲಿ ವಿಳಂಬ ಹಾಗೂ ಅನ್ಯಾಯ ಆಗುತ್ತಿರುವುದನ್ನು ಕಾರ್ಮಿಕ ಇಲಾಖೆ ಮನಗಂಡು ತಕ್ಷಣ ಎಲ್ಲಾ ಅರ್ಹ ಕಾರ್ಮಿಕರಿಗೆ ಸವಲತ್ತು ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ವತಿಯಿಂದ ಬಂಟ್ವಾಳ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಾರ್ಮಿಕರಿಗೆ ಸರಕಾರ ಸವಲತ್ತು ವಿತರಿಸುವ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯತ್ ಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಸದ್ಯ ಇರುವ ಲೋಪದೋಷಗಳನ್ನು ಸರಿಪಡಿಸಿ ಪಂಚಾಯತ್ ಮೂಲಕವೇ ವಿತರಿಸುವಂತೆ ಇದೇ ವೇಳೆ ನಿಯೋಗ ಮನವಿ ಮಾಡಿತು.  

ನಿಯೋಗದಲ್ಲಿ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ರೋಶನ್ ಕೆ ರೈ, ಬಂಟ್ವಾಳ ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಸುವರ್ಣ, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅರುಣ್ ಶೆಟ್ಟಿ, ಪದಾಧಿಕಾರಿ ನಿರಂಜನ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಪಕ್ಷ ಮುಖಂಡರಾದ ಮಹೇಶ್ ನಾಯಕ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರಮ್ಲಾನ್ ಒಬೋರು, ರವಿರಾಜ್ ಜೈನ್, ಶಶಿಧರ್ ಕನಪಾಡಿ, ಮನೋಜ್ ಕಣಪಾಡಿ, ಚಂದ್ರಹಾಸ ದೇವಂದಬೆಟ್ಟು, ಪ್ರವೀಣ್ ರೊಡ್ರಿಗಸ್, ರಾಮಣ್ಣ ಪೂಜಾರಿ ಮೊದಲಾದವರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಾರ್ಮಿಕರಿಗೆ ಪಂಚಾಯತ್ ಮೂಲಕ ನ್ಯಾಯೋಚಿತವಾಗಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳಿ : ಬಂಟ್ವಾಳ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದಿಂದ ಮನವಿ Rating: 5 Reviewed By: karavali Times
Scroll to Top