ಬಂಟ್ವಾಳ, ಆಗಸ್ಟ್ 26, 2021 (ಕರಾವಳಿ ಟೈಮ್ಸ್) : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಹಿರಿಯ ಪತ್ರಕರ್ತ ದೈಪಲ ಮಾಧವ ಕುಲಾಲ್ (ಡಿ ಎಂ ಕುಲಾಲ್) ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
54 ವರ್ಷ ಪ್ರಾಯದ ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಒಬ್ಬಳು ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುಂಗಾರು, ಮಂಗಳೂರು ಮಿತ್ರ, ನೇತ್ರಾವತಿ ವಾರ್ತೆ ಮೊದಲಾದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಇತ್ತೀಚೆಗಷ್ಟೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಅವರಿಗೆ "ಚಾವಡಿ ಪುರಸ್ಕಾರ" ನೀಡಿ ಗೌರವಿಸಿತ್ತು.
0 comments:
Post a Comment