ಬಂಟ್ವಾಳ, ಆಗಸ್ಟ್ 30, 2021 (ಕರಾವಳಿ ಟೈಮ್ಸ್) : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಒಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಫಲವಾಗಿ ಬಲಿಷ್ಠ ಭಾರತ ನಿರ್ಮಾಣವಾಗಿದೆ ಹೊರತು ಬಿಜೆಪಿಗರ ಸುಳ್ಳಿನಿಂದ ಏನೂ ಸಾಧನೆಯಾಗಿಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬಡಗಕಜೆಕಾರಿನಲ್ಲಿ ವಲಯ ಕಾಂಗ್ರೆಸ್ ವತಿಯಿಂದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಜಾಗೃತಿ ಸಮಾವೇಶದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಳ್ಳಿನ ಸರಮಾಲೆ ನೇಯುತ್ತಾ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಎರಡನೇ ಬಾರಿಗೆ ದೇಶದ ಅಧಿಕಾರ ಹಿಡಿದಿದೆಯೇ ಹೊರತು ದೇಶಕ್ಕಾಗಿ ಈ ಬಿಜೆಪಿ ನಾಯಕರಾಗಲೀ, ಕಾರ್ಯಕರ್ತರಾಗಲೀ ಏನನ್ನೂ ಮಾಡಿಲ್ಲ ಎಂದರು.
ಜಿ ಪಂ ಹಾಗೂ ತಾ ಪಂ ಚುನಾವಣೆಗಳು ಮುಂದಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಬಿಜೆಪಿಗರ ಸುಳ್ಳುಗಳನ್ನು ಎಳೆ ಎಳೆಯಾಗಿ ಜನರ ಮುಂದಿಡುವ ಮೂಲಕ ಮತ್ತೆ ಕಾಂಗ್ರೆಸ್ ಯುಗಕ್ಕೆ ಮರಳುವಂತೆ ಕಾರ್ಯನಿರ್ವಹಿಸಬೇಕು ಎಂದು ರಮಾನಾಥ ರೈ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಬೆನ್ನೆಲುಬಾಗಿದ್ದು, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅವರ ಸಲಹೆಗಳನ್ನು ಪರಿಗಣಿಸಿಯೇ ಚುನಾವಣೆಗೆ ತಕ್ಷಣದಿಂದಲೇ ತಯಾರಿ ನಡೆಸಲಾಗುವುದು ಎಂದರು.
ಇದೇ ವೇಳೆ ನೂತನ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸುಧಾಕರ್ ಶೆಣೈ ಅವರನ್ನು ಅಭಿನಂದಿಸಲಾಯಿತು.
ಪಕ್ಷ ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಸಂಪತ್ ಕುಮಾರ್ ಶೆಟ್ಟಿ, ಜಗದೀಶ್ ಕೊಯಿಲ, ಸತೀಶ್ಚಂದ್ರ ಕೆ ಎ, ಲವೀನಾ ವಿಲ್ಮಾ ಮೊರಾಸ್, ಅಸ್ಮಾ ಅಝೀಝ್, ಜಯ ಬಂಗೇರ, ಪ್ರಶಾಂತ್ ಕುಮಾರ್ ಜೈನ್, ಬಾಲಾಜಿ ರಾವ್, ಆದಂ ಕುಂಞÂ, ಬಿ ಅರ್ ಅಂಚನ್, ಸದಾನಂದ ಶೆಟ್ಟಿ, ಬಾಲಕೃಷ್ಣ ಪೂಜಾರಿ ಮಣಿನಾಲ್ಕೂರು, ವಾಸು ಪೂಜಾರಿ ಕಜೆಕಾರು, ವಿಶ್ವನಾಥ್ ಪೂಜಾರಿ, ರಾಮಚಂದ್ರ ಪೂಜಾರಿ ನಾಡೆಲ್, ಆನಂದ ಪೂಜಾರಿ ಕರ್ಲ, ಜಾನ್ ಮೊರಾಸ್, ಗಂಗಾಧರ್ ಪೂಜಾರಿ ಮಜಲ್, ಅಬ್ದುಲ್ಲಾ ಪಾಂಡವರಕಲ್ಲು, ರಾಕೇಶ್ ಮಾಡ, ಹರಿಕೀರ್ತಿ ಮಾಡಪಲ್ಕೆ, ಅಬೂಬಕ್ಕರ್ ಕೆದಿಲೆ, ವಿಠ್ಠಲ ಕರ್ಲ, ಕೇಶವ ಪೂಜಾರಿ ಮಜಲು, ಮೋಹಿನಿ, ಡೀಕಯ್ಯ ಬಂಗೇರ, ವಸಂತ ಪೂಜಾರಿ ಮಿತ್ತೊಟ್ಟು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment