ಮಂಗಳೂರು, ಜುಲೈ 16, 2021 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಪಾವತಿಯಾಗುವ ಮೊತ್ತವನ್ನು ಪಡೆಯಲು ಅಂಚೆ ಕಛೇರಿಗಳಲ್ಲಿ ಶೂನ್ಯ ಶಿಲ್ಕು ಉಳಿತಾಯ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಸರಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಿಗಲಿರುವ ನೇರ ನಗದು ವರ್ಗಾವಣೆಯನ್ನು ವಿದ್ಯಾರ್ಥಿಗಳು ಪಡೆಯಲು ಅನುಕೂಲವಾಗುವಂತೆ ಅಂಚೆ ಕಛೇರಿಗಳಲ್ಲಿ ಶೂನ್ಯ ಶಿಲ್ಕು ಖಾತೆಯನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ.
ವಿದ್ಯಾರ್ಥಿಯ ಹಾಗೂ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಪ್ರತಿ, ಫೆÇೀಟೋ, ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದ ದೃಢೀಕರಣ ಪತ್ರ ಹಾಗೂ ಆಧಾರನ್ನು ಖಾತೆಗೆ ಜೋಡಿಸಲು ಅಧಿಕೃತ ನಮೂನೆಯಲ್ಲಿ ಅರ್ಜಿ ನೀಡಿ ಈ ಖಾತೆಯನ್ನು ಯಾವುದೇ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ.
ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಲವು ಪ್ರಯೋಜನಗಳಿದ್ದು, ಶೂನ್ಯ ಶಿಲ್ಕು (Zero Balance) ಮೂಲಕ ಖಾತೆ ತೆರೆಯಬಹುದು, ಮನೆಯ ಸಮೀಪದ ಅಂಚೆ ಕಚೇರಿಯಲ್ಲಿಯೇ ಖಾತೆ ತೆರೆಯಬಹುದು, ಸರಕಾರಿ ಯೋಜನೆಗಳಲ್ಲಿ ಪಾವತಿಯಾಗುವ ನೇರ ನಗದು ವರ್ಗಾವಣೆಯ ಮೊತ್ತವನ್ನು ಈ ಖಾತೆಯ ಮೂಲಕ ಪಡೆಯಬಹುದಾಗಿದೆ, ವಿದ್ಯಾರ್ಥಿಗಳಿಗೆ ಆಧಾರ್ ಈಗಾಗಲೇ ನೋಂದಣಿ ಆಗಿರದಿದ್ದರೆ ಅಥವಾ ನೋಂದಣಿ ಆಗಿದ್ದು ಅದರಲ್ಲಿ ಯಾವುದೇ ಪರಿಷ್ಕರಣೆ ಇದ್ದಲ್ಲಿ, ಅಂಚೆ ಕಛೇರಿಯಲ್ಲಿಯೇ ನೋಂದಣಿ ಮಾಡಲು ಅವಕಾಶವಿದೆ. ಈ ಬಗ್ಗೆ ಎಲ್ಲಾ ವಿದ್ಯಾರ್ಥಿ ಪೆÇೀಷಕರು ಗಮನಿಸಿ ಅಂಚೆ ಇಲಾಖೆಯ ಪ್ರಯೋಜನ ಪಡೆಯುವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment