ಬಂಟ್ವಾಳ, ಜುಲೈ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಅರಳ ಗ್ರಾಮದ ನೆಲ್ಲಿಮಾರು ಬಳಿ ಟೆಂಪೋ ಮಗುಚಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕೆ ಮಂಗಳೂರು ತಾಲೂಕು, ಅಡ್ಡೂರು ಗ್ರಾಮದ ಕಳಸಗಿರಿ ನಿವಾಸಿ ನೀಲಮ್ಮ (28) ಅವರು ಗಾಯಗೊಂಡಿದ್ದಾರೆ.
ನೀಲಮ್ಮ ಅವರು ಕೂಲಿ ಕೆಲಸದ ನಿಮಿತ್ತ ಟೆಂಪೆÇೀ ವಾಹನದಲ್ಲಿ ಬಂಟ್ವಾಳದ ಮೂಲರಪಟ್ಣಕ್ಕೆ ಹೋದವರು ಕೆಲಸ ಮುಗಿಸಿ ಅಡ್ಡೂರು ಕಡೆಗೆ ವಾಪಾಸು ಬರುತ್ತಿದ್ದ ವೇಳೆ ನೆಲ್ಲಿಮಾರು ಬಳಿ ಟೆಂಪೆÇೀ ವಾಹನ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ. ಘಟನೆಯಿಂದ ನೀಲಮ್ಮ ಅವರು ಗಾಯಗೊಂಡಿದ್ದು ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಟೆಂಪೋ ಚಾಲಕ ಅಬ್ದುಲ್ ರಹಿಮಾನ್ ಅವರ ಅತೀ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನವೇ ಕಾರಣ ಎಂದು ನೀಲಮ್ಮ ದೂರಿದ್ದಾರೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 279 ಪ್ರಕಾರ ಕಲಂ 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment