ಬೆಂಗಳೂರು, ಜುಲೈ 12, 2021 (ಕರಾವಳಿ ಟೈಮ್ಸ್) : ಕೊರೋನಾ 2ನೇ ಅಲೆ ಹಾಗೂ ಲಾಕ್ ಡೌನ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ದ ಪರೀಕ್ಷಾ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಲು ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಇದೀಗ ವಿಟಿಯು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಜುಲೈ 27 ರಿಂದ ಪ್ರಥಮ ಸೆಮಿಸ್ಟರ್ ಪರೀಕ್ಷೆ ಆರಂಭವಾಗಲಿದ್ದು, ಅಗಸ್ಟ್ 3 ರವರೆಗೆ ನಡೆಯಲಿವೆ. ಅಗಸ್ಟ್ 4 ರಿಂದ ಅಗಸ್ಟ್ 13 ರವರೆಗೆ ವೈವಾ ಮತ್ತು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.
ಜನವರಿ, ಮಾರ್ಚ್ ತಿಂಗಳಲ್ಲಿ ನಡೆದಿದ್ದ ಸೆಮಿಸ್ಟರ್ ಪರೀಕ್ಷಾ ಫಲಿತಾಂಶದ ಬಗ್ಗೆ ಮರು ಮೌಲ್ಯಮಾಪನಕ್ಕೂ ವಿಟಿಯು ಅರ್ಜಿ ಆಹ್ವಾನಿಸಿದೆ. ಫಲಿತಾಂಶದಲ್ಲಿ ತಕರಾರಿದ್ದರೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ವಿಟಿಯು ತಿಳಿಸಿದೆ. ಜುಲೈ 14ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಉತ್ತರ ಪತ್ರಿಕೆ ಫೆÇೀಟೋ ಕಾಪಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮರು ಮೌಲ್ಯಮಾಪನ ಅರ್ಜಿ ಆಯಾ ಕಾಲೇಜಿಗೆ ಸಲ್ಲಿಸಬೇಕು. http://prexamblr.Vtu.Ac.inನಲ್ಲಿ ಅರ್ಜಿ ವೀಕ್ಷಿಸಬಹುದು ಎಂದು ವಿಟಿಯು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
0 comments:
Post a Comment