ಬಂಟ್ವಾಳ, ಜುಲೈ 28, 2021 (ಕರಾವಳಿ ಟೈಮ್ಸ್) : ತಾಲೂಕಿನ ಸರಪಾಡಿ ಗ್ರಾಮದ ಮಣಿಹಳ್ಳ ಸಮೀಪದ ಪೆರಿಯಪಾದೆಯಲ್ಲಿ ಬುಧವಾರ ಅಟೋ ರಿಕ್ಷಾ ಪಲ್ಟಿಯಾಗಿ ಶಾಂತಿಪಲ್ಕೆ ನಿವಾಸಿ ಫ್ರಾನ್ಸಿಸ್ (80) ಮೃತಪಟ್ಟಿದ್ದು, ಜಯಶ್ರೀ, ಜಾನ್ ಸುವಾರಿಸ್, ಫ್ರಾನ್ಸಿಸ್, ತಾರಾ, ಗಣೇಶ್ ಪೈ ಅವರುಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರು ಬಂಟ್ವಾಳ ಸರಕಾರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸರಪಾಡಿ ಕಡೆಯಿಂದ ಬಂಟ್ವಾಳ ಕಡೆಗೆ ಅಟೋ ರಿಕ್ಷಾ ಪ್ರಯಾಣಿಕರನ್ನು ಹೇರಿಕೊಂಡು ಬರುತ್ತಿದ್ದ ವೇಳೆ ಪೆರಿಯಪಾದೆಯಲ್ಲಿ ಚಾಲಕನ ನಿಯಂತ್ರಣ ಮೀರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಗೆ ಅಟೋ ರಿಕ್ಷಾ ಚಾಲಕ ಸುನಿಲ್ ಫೆರ್ನಾಂಡಿಸ್ ಅವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಮೃತರ ಸೊಸೆ ಜಯಶ್ರೀ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2021 ಕಲಂ 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment