ಬಂಟ್ವಾಳ, ಜುಲೈ 27, 2021 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಳ್ಳಿಗೆ ಗ್ರಾಮದ ಬೆಟ್ಟು ನಿವಾಸಿ ಲಕ್ಷ್ಮಣ ಪೂಜಾರಿ ಅವರ ಪುತ್ರ ಕಾರ್ತಿಕ್ ಪೂಜಾರಿ (24) ಅವರು ಸೋಮವಾರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ತುಂಬೆ ಗ್ರಾಮದ ದೇಮುಂಡೆ ಬಳಿ ಕಿರಿದಾದ ರಸ್ತೆಯಲ್ಲಿ ಎದುರಿನಿಂದ ವೇಗದಲ್ಲಿ ಬರುತ್ತಿದ್ದ ಕಾರಿನ ಚಾಲಕನೊಂದಿಗೆ ವೇಗದ ಬಗ್ಗೆ ವಿಚಾರಿಸಿದ ಕಾರಣಕ್ಕೆ ಕಾರು ಚಾಲಕ ನಾಸಿರ್ ಹಾಗೂ ಆತನ ಸಂಬಂಧಿ ಟಿ ಕೆ ಶರೀಫ್ ಜೊತೆ ಸೇರಿ ಹಲ್ಲೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ತಿಕ್ ಪೂಜಾರಿ ಮನೆಯಿಂದ ತುಂಬೆಯ ಮೆಡಿಕಲ್ ಶಾಪಿಗೆ ಔಷಧಿಗೆಂದು ದ್ವಿಚಕ್ರ ವಾಹನದಲ್ಲಿ ತೆರಳಿತ್ತಿದ್ದ ವೇಳೆ ದೇಮುಂಡೆ ಬಳಿ ಕಿರಿದಾದ ರಸ್ತೆಯಲ್ಲಿ ಅತೀ ವೇಗದಿಂದ ಚಲಾಯಿಸಿಕೊಂಡು ಬಂದ ಬಗ್ಗೆ ಕಾರು ಚಾಲಕನಲ್ಲಿ ಪ್ರಶ್ನಿಸಿದ್ದಕ್ಕೆ ಕಾರು ಚಾಲಕ ನಾಸಿರ್ ಹಲ್ಲೆ ನಡೆಸಿದ್ದು, ಬಳಿಕ ಆತನ ಸಂಬಂಧಿ ಟಿ ಕೆ ಶರೀಫ್ ಕೂಡಾ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ಕಾರ್ತಿಕ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಾಳು ಕಾರ್ತಿಕ್ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2021 ಕಲಂ 232, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಮಾಡಿದಕ್ಕೆ ಪುರಾವೆ ಇದ್ದರೆ ಸಾಕ್ಷಿ ಸಮೇತ ತಿಳಿಸಿ, ಹಾಗೆನೇ ಇಲ್ಲಿ ಯಾರಿಗೆ ಯಾರ ಮೇಲೆ ವೈಶಮ್ಯ ಇದೆ ಎಂದು ತಿಳಿಯಿರಿ, ನೀವೇ ಮಾಧ್ಯಮದವರು ಜಡ್ಜ್ಮೆಂಟ್ ಕೊಡಬೇಡಿ, ನಿಮ್ಮನ್ನು ಜನರು ಗಮನಿಸುತ್ತಿರುತ್ತಾರೆ..
ReplyDelete