ಬಂಟ್ವಾಳ, ಜುಲೈ 12, 2021 (ಕರಾವಳಿ ಟೈಮ್ಸ್) : ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡು ಎಸ್ಸೆಸ್ಸೆಫ್ ಹೆಲ್ಪ್ ಲೈನ್ ವತಿಯಿಂದ ಕಾಪಿಕಾಡು ಮದರಸದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮಕ್ಕೆ ದುವಾ ಮೂಲಕ ಚಾಲನೆ ನೀಡಿ ಮಾತನಾಡಿದ ಸಂಘಟನೆ ನಾಯಕ ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ಅವರು ಊರಿನ ಯುವಕರು ಧಾರ್ಮಿಕ ಚೌಕಟ್ಟಿನೊಳಗೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಎಲ್ಲಾ ಜಾತಿ-ಮತ ಬಾಂಧವರ ವಿಶ್ವಾಸ ಗಳಿಸಿ ಮಾನವೀಯ ಧರ್ಮವನ್ನು ಮೈಗೂಡಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಭಾಗವಹಿಸಿ ಶುಭ ಹಾರೈಸಿದರು.
ಸ್ವಚ್ಛತಾ ಕಾರ್ಯಕ್ರಮದ ಬಳಿಕ ಉಂಬಳಿಗದ್ದೆ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಪರಿಶಿಷ್ಟ ಜಾತಿಯ ಒಂಟಿಜೀವಿ ಚೋಮ ನಲಿಕೆ ಎಂಬವರ ವಾಸದ ಮನೆಯನ್ನು ದುರಸ್ಥಿಗೊಳಿಸಲಾಯಿತು.
ಎಸ್ ಎಸ್ ಎಫ್ ಕಾಪಿಕಾಡು ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಕಾಪಿಕಾಡು , ಪಧಾಧಿಕಾರಿಗಳಾದ ಅಬ್ದುಲ್ ಆಜ್ಹೀಜ್ ,ಸಿದ್ದೀಕ್ ಫಾಲಿಲಿ ತೋಟ,ಹಂಝ ದರ್ಬೆ,ಸಿದ್ದೀಕ್ ಮುಸ್ಲಿಯಾರ್ ಬೈಲ್, ಅಬ್ದುಲ್ ರಝಕ್ ಕಲ್ಪನೆ ಇ£್ನತರರು ಪಾಲ್ಗೊಂಡಿದ್ದರು.
0 comments:
Post a Comment