ಮಿತಿ ಮೀರಿದ ನೀರಿನ ಸಮಸ್ಯೆ : ತಾಳ್ಮೆ ಮೀರಿದ ಮಹಿಳೆಯರಿಂದ ಸಜಿಪಮುನ್ನೂರು ಪಂಚಾಯತಿಗೆ ಮುತ್ತಿಗೆ  - Karavali Times ಮಿತಿ ಮೀರಿದ ನೀರಿನ ಸಮಸ್ಯೆ : ತಾಳ್ಮೆ ಮೀರಿದ ಮಹಿಳೆಯರಿಂದ ಸಜಿಪಮುನ್ನೂರು ಪಂಚಾಯತಿಗೆ ಮುತ್ತಿಗೆ  - Karavali Times

728x90

3 July 2021

ಮಿತಿ ಮೀರಿದ ನೀರಿನ ಸಮಸ್ಯೆ : ತಾಳ್ಮೆ ಮೀರಿದ ಮಹಿಳೆಯರಿಂದ ಸಜಿಪಮುನ್ನೂರು ಪಂಚಾಯತಿಗೆ ಮುತ್ತಿಗೆ 

 

ಮಹಿಳೆಯರ ಸಮಸ್ಯೆ ಆಲಿಸದ ಮಹಿಳಾ ಅಧ್ಯಕ್ಷೆಯ ಬೇಜವಾಬ್ದಾರಿ ಬಗ್ಗೆ ಪ್ರತಿಭಟನಾಕಾರರ ಆಕ್ರೋಶ

  ಬಂಟ್ವಾಳ, ಜುಲೈ 03, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರದಲ್ಲಿ ಕಳೆದ ಕೆಲ ಸಮಯಗಳಿಂದ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು, ಜನ ನಿತ್ಯದ ಕಾರ್ಯಕ್ಕಾಗಿ ನೀರಿಗಾಗಿ ಹಾಹಾಕಾರ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಪಂಚಾಯತ್ ಅಧಿಕಾರಿಗಳು ಹಾಗೂ ಪ್ರತಿನಿಧಿಗಳಿಗೆ ಸಮಸ್ಯೆಯ ಆಳ ಮನವರಿಕೆ ಮಾಡಿದರೂ ಸ್ಪಂದನೆ ಶೂನ್ಯವಾಗಿತ್ತು. ಇದರಿಂದ ತಾಳ್ಮೆ ಕಳೆದುಕೊಂಡ ಇಲ್ಲಿನ ಮಹಿಳೆಯರು ಒಟ್ಟಾಗಿ ಶನಿವಾರ ಸಜಿಪಮುನ್ನೂರು ಪಂಚಾಯತ್ ಕಛೇರಿಗೆ ದೌಡಾಯಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆಳೆದಿದ್ದಾರೆ. 

 ನೇತ್ರಾವತಿ ನದಿ ತಟದಲ್ಲಿರುವ ಪಂಚಾಯತ್ ಇದಾಗಿದ್ದರೂ ಮಳೆಗಾಲದಲ್ಲೇ ನೀರಿಗಾಗಿ ಹಾಹಾಕಾದ ಅನುಭವಿಸುವ ಪರಿಸ್ಥಿತಿ ಬಂದೊದಗಿರುವುದು ಗ್ರಾಮಸ್ಥರಾದ ನಮ್ಮ ದೌರ್ಭಾಗ್ಯವೋ ಅಥವಾ ಆಳುವವರ, ಅಧಿಕಾರಿಗಳ ನಿರ್ಲಕ್ಷ್ಯವೋ ಯಾವುದೋ ಗೊತ್ತಿಲ್ಲ ಎನ್ನುತ್ತಾರೆ ಶಾಂತಿನಗರ ನಿವಾಸಿಗಳು. 

 ಸಜಿಪಮುನ್ನೂರು ಗ್ರಾ ಪಂ ವ್ಯಾಪ್ತಿಯ ಶಾಂತಿ ನಗರ ಪ್ರದೇಶದಲ್ಲಿ ಹಲವು ವಾಸ್ತವ್ಯದ ಮನೆಗಳಿದ್ದು, ಬಹುತೇಕ ಕುಟುಂಬಗಳು ಅತ್ಯಂತ ಬಡತನದವುಗಳಾಗಿವೆ. ಇಲ್ಲಿ ನಿತ್ಯವೂ ನೀರು ಸರಬರಾಜು ಸಮಸ್ಯೆ ಕಾಡುತ್ತಿದ್ದು, ಪಂಚಾಯತ್ ನಿರ್ಲಕ್ಷ್ಯದಿಂದಾಗಿ ಟ್ಯಾಂಕರ್ ನೀರು ತರಿಸಿ ಅವಶ್ಯಕತೆ ಈಡೇರಿಸುವಷ್ಟು ಇಲ್ಲಿನ ಕುಟುಂಬಗಳು ಶಕ್ತವಾಗಿಲ್ಲ. ಈ ಬಗ್ಗೆ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದರು ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರೆಲ್ಲ ಒಟ್ಟಾಗಿ ಶನಿವಾರ ನೇರವಾಗಿ ಸಜಿಪಮುನ್ನೂರು ಗ್ರಾಮ ಪಂಚಾಯತಿಗೆ ದೌಡಾಯಿಸಿದ್ದಾರೆ. 

ಆದರೆ ಸಮಸ್ಯೆಯ ಅರಿವಿದ್ದೂ ಕೂಡಾ ಪಂಚಾಯತ್ ಅಧ್ಯಕ್ಷರು ಕನಿಷ್ಠ ಜವಾವ್ದಾರಿಯನ್ನೂ ಮೆರೆದಿಲ್ಲ. ಅಧ್ಯಕ್ಷೆ ಪಂಚಾಯತ್ ಕಚೇರಿಗೇ ಆಗಮಿಸದೆ ಓರ್ವ ಮಹಿಳೆಯಾಗಿದ್ದುಕೊಂಡು ಪಂಚಾಯತ್ ಅಧ್ಯಕ್ಷರು ಮಹಿಳೆಯರ ಬವಣೆಗೆ ಸ್ಪಂದಿಸುವ ಮನೋಭಾವ ತೋರಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

 ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾರ್ಯದರ್ಶಿ‌ ಪಂಚಾಯತ್ ಕಚೇರಿಗೆ ಬಂದ ಮಹಿಳೆಯರ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಆಡಳಿತದೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಬಳಿಕ ಮಹಿಳಯರು ಸ್ಥಳದಿಂದ‌ ತೆರಳಿದರು.

  • Blogger Comments
  • Facebook Comments

1 comments:

  1. ಪಂಚಾಯತಿ ನಿಂದ ಜನಸಾಮಾನ್ಯರು ಬಯಸುವುದು ಇದನ್ನು ಮಾತ್ರ ನೀರು ಮತ್ತು ದಾರಿದೀಪ. ಅದನ್ನಾದರೂ ವ್ಯವಸ್ಥೆ ಮಾಡಿಕೊಡಿ ಉಳಿದವುಗಳು ಶಾಸಕರು ನೋಡಿಕೊಳ್ಳುತ್ತಾರೆ

    ReplyDelete

Item Reviewed: ಮಿತಿ ಮೀರಿದ ನೀರಿನ ಸಮಸ್ಯೆ : ತಾಳ್ಮೆ ಮೀರಿದ ಮಹಿಳೆಯರಿಂದ ಸಜಿಪಮುನ್ನೂರು ಪಂಚಾಯತಿಗೆ ಮುತ್ತಿಗೆ  Rating: 5 Reviewed By: karavali Times
Scroll to Top