ಉಳ್ಳಾಲ, ಜುಲೈ 20, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಉಳ್ಳಾಲ ತಾಲೂಕು ಗ್ರಾಮ ಪಂಚಾಯತ್ ಸದಸ್ಯರುಗಳ ಒಕ್ಕೂಟ ರಚನಾ ಸಭೆ ಕೋಣಾಜೆ-ಅಸೈಗೋಳಿ ಮಂಗಳಗಂಗೋತ್ರಿ ಲಯನ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ ಅಚ್ಯುತ ಗಟ್ಟಿ ಅವರು ಒಕ್ಕೂಟ ರಚನೆಯ ಮಹತ್ವ ಹಾಗೂ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.
ಉಳ್ಳಾಲ ತಾಲೂಕಿನಲ್ಲಿ 17 ಗ್ರಾಮ ಪಂಚಾಯತ್, ಉಳ್ಳಾಲ ನಗರ ಸಭೆ, ಸೋಮೇಶ್ವರ ಪುರಸಭೆ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ಒಳಗೊಂಡಿದೆ.
ಒಕ್ಕೂಟದ ಅಧ್ಯಕ್ಷರಾಗಿ ಭರತ್ ರಾಜ್ ಶೆಟ್ಟಿ ಫಜೀರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ ಅಚ್ಯುತ ಗಟ್ಟಿ ಕೊಣಾಜೆ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಆರ್ ಕೆ ಸಿ ಮುನ್ನೂರು, ಉಪಾಧ್ಯಕ್ಷರುಗಳಾಗಿ ಸತೀಶ್ ಆಚಾರ್ಯ ಬೋಳಿಯಾರು, ವೇಲೇರಿಯನ್ ಡಿ’ಸೋಜ ಪಾವೂರು, ಲೋಲಾಕ್ಷಿ ಶೆಟ್ಟಿ ಕುರ್ನಾಡು, ಕಾರ್ಯದರ್ಶಿಗಳಾಗಿ ನಝರ್ ಷಾ ಕೊಣಾಜೆ, ಸಿ ಎಂ ರಹಿಮಾನ್ ನರಿಂಗಾನ, ಅನಿತಾ ಡಿ’ಸೋಜ ಹರೇಕಳ, ಸಿರಾಜುದ್ದೀನ್ ಫಜೀರ್, ಸಂಘಟನಾ ಕಾರ್ಯದರ್ಶಿಗಳಾಗಿ ಫಯಾಝ್ ನರಿಂಗಾನ, ದೇವಣ್ಣ ಶೆಟ್ಟಿ ಕೊಣಾಜೆ, ರಾಜ್ಯ ಪ್ರತಿನಿಧಿಯಾಗಿ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ಪ್ರತಿನಿಧಿಯಾಗಿ ಗಣೇಶ್ ನಾಯ್ಕ್ ಕುರ್ನಾಡು, ಮಾಧ್ಯಮ ಕಾರ್ಯದರ್ಶಿಯಾಗಿ ಮಹಮ್ಮದ್ ಇಕ್ಬಾಲ್ ಕೊಣಾಜೆ ಅವರನ್ನು ಆರಿಸಲಾಯಿತು. ಅಲ್ಲದೆ ಒಕ್ಕೂಟದ ಖಾಯಂ ಆಹ್ವಾನಿತರಾಗಿ ಎಲ್ಲಾ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು ಉಪಸ್ಥಿತರಿರುತ್ತಾರೆ.
0 comments:
Post a Comment